ನೌಕರರ ನಾನಾ ಸಮಸ್ಯೆಗಳು ಇತ್ಯರ್ಥ

Oplus_16908288
Oplus_16908288
Published on

ಹರಪನಹಳ್ಳಿ: ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರಿಂದಾಗಿ ಸರ್ಕಾರಿ ನೌಕರರ ವೇತನ ಹೆಚ್ಚಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ಮನೋಹರ್ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಿವೃತ್ತಿ ಹೊಂದಿದ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ವಿವಿಧ ಇಲಾಖೆಗಳಲ್ಲಿ ವರ್ಗಾವಣೆ, ಪ್ರಾಥಮಿಕ ಶಾಲೆಗಳಿಗೆ ಮೊಟ್ಟೆ ಸರಬರಾಜು ಮಾಡುವುದು ಸೇರಿದಂತೆ ವಿವಿಧ ಸಮಸ್ಯೆಗಳಿದ್ದು ಸಿ.ಎಸ್.ಷಡಾಕ್ಷರಿ ಬಗೆಹರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಪರಿಷತ್ ಸದಸ್ಯ ಷರೀಫ್ ಮಕರಬ್ಬಿ, ಕಾರ್ಯಕಾರಿಣಿ ಸಮಿತಿ ಸದಸ್ಯ ಮಂಜುನಾಥ ಪೂಜಾರ, ಪಿ.ಬಸವರಾಜ್, ಗಿರೀಶ್, ಗುರುನಾಥ, ಸಂಗಯ್ಯ, ಕೆ.ಅಂಜಿನಪ್ಪ, ಕರಿಬಸಪ್ಪ, ಹೊನ್ನಪ್ಪ, ಲೀಲಾವತಿ, ಲಲಿತಮ್ಮ, ಸಿ.ವಿರೂಪಾಕ್ಷಪ್ಪ, ವೈ.ಚಂದ್ರಪ್ಪ, ಮುತ್ತಿಗಿ ಲಕ್ಷ್ಮಪ್ಪ, ಕೆ.ಸಿದ್ದಪ್ಪ, ಮಲ್ಲಿನಾಥ ಎಂ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net