

ಹಾಸನ: ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಬಾಗೂರು ಕೃಷ್ಣೇಗೌಡ ಅವರು ನಿರ್ದೇಶಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಅವರು, 2024-2029ನೇ ಸಾಲಿನ ಸರಕಾರಿ ನೌಕರರ ಸಂಘಕ್ಕೆ ಈಗಾಗಲೇ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಆಗಿ ಈಗ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ನಿರ್ದೇಶಕರಾಗಿ ಮತ್ತು ತಾಲೂಕು ಅಧ್ಯಕ್ಷರುಗಳಾಗಿ ಆಯ್ಕೆಗೊಂಡವರಿಗೆ ಅಭಿನಂದನೆಯನ್ನು ಮೊದಲು ತಿಳಿಸುತ್ತೇನೆ. ಸರಕಾರಿ ನೌಕರರ ಸಂಘದಲ್ಲಿ ಕೆಲಸಗಳು ಬಹಳಷ್ಟಿದ್ದು, ಸರಕಾರಿ ನೌಕರರ ಸಂಘದಲ್ಲಿ ಸಮಸ್ಯೆಗಳು ಇದ್ದು, ಮುಖ್ಯವಾಗಿ ಪ್ರಮೋಷನ್, ಪೆನ್ಷನ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಾಗುತ್ತೇವೆ ಎಂದರು.
ಈ ಸರಕಾರಿ ನೌಕರರ ಭವನವನ್ನು ಅಭಿವೃದ್ಧಿ ಮಾಡಲು ನವೀಕರಣಗೊಳಿಸಬೇಕಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಸರಕಾರಿ ನೌಕರರಿಗೆ ಭವನ, ಸಮುದಾಯ ಭವನಗಳನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೇ ಅಂತಹ ಭವನಗಳು ಹಾಸನದಲ್ಲಿ ಇರುವುದಿಲ್ಲ. ಉತ್ತಮ ಭವನ ನಿರ್ಮಾಣ ಶ್ರಮವಹಿಸಲಾಗುವುದು ಎಂದು ಹೇಳಿದರು.
ಖಜಾಂಚಿ ಸ್ಥಾನಕ್ಕೆ ಹೇಮಂತ್, ರಾಜ್ಯ ಪರಿಷತ್ತು ಸ್ಥಾನಕ್ಕೆ ವಿಷ್ಣು ಪ್ರಕಾಶ್ (ಮಂಜುನಾಥ್) ಸ್ಪರ್ಧೆ ಮಾಡಿದ್ದು, ಮೂವರನ್ನು ಗೆಲ್ಲಿಸಿದರೇ 8ನೇ ವೇತನ ಆಯೋಗ, ಶಿಕ್ಷಕರಿಗೆ ಸಂಬಂಧಿಸಿದ ಸಮಸ್ಯೆ ಕೂಡ ಇದ್ದು, ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುವುದು ಎಂದರು
ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ಬಾಗೂರು ಮಂಜೇಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಈ. ಕೃಷ್ಣೇಗೌಡ, ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಹೇಮಂತ್, ವಿಷ್ಣು ಪ್ರಕಾಶ್ ( ಮಂಜುನಾಥ್) ಹಾಗೂ ಜಿಲ್ಲಾ ಸರಕಾರಿ ನೌಕರರ ಸಂಘದ ನಿರ್ದೇಶಕರು ಸೇರಿದಂತೆ ಇತರರು ಇದ್ದರು