

ಬಾಗಲಕೋಟೆ: ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದ ಪರಿಸ್ಥಿತಿ ಕರ್ನಾಟಕದಲ್ಲಿದೆ, ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಮನೆ ಮಾಡಿದೆ. ಈಡಿ ಕರ್ನಾಟಕವೇ ಗೊಂದಲದಲ್ಲಿದೆ. ಕಾರ್ಯಕರ್ತರು ನೋವು ತೋಡಿಕೊಳ್ಳಲು ಜಾಗವಿಲ್ಲವಾಗಿದೆ. ಪಕ್ಷ ಕಟ್ಟಿದವರಿಗೂ ಸಂಕಟ ಎದುರಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿಯಿಂದ ಬಿಜೆಪಿಯಲ್ಲೂ ಹಾಗೂ ಕಾಂಗ್ರೆಸ್‌ನಲ್ಲೂ ಗೊಂದಲಗಳಿವೆ. ಕಾಂಗ್ರೆಸ್ ಪಕ್ಷ ಯಾರೆಲ್ಲ ಕಟ್ಟಿದ್ದಾರೋ ಅವರಿಗೆಲ್ಲ ನೋವಾಗಿದೆ. ಬಿಜೆಪಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಪ್ರಮುಖ ಕಾರ್ಯಕರ್ತರಿಗೆ ನೋವು ತೋಡಿಕೊಳ್ಳಲು ಜಾಗವಿಲ್ಲ. ಅಂತಹ ಪರಿಸ್ಥಿತಿ ಕರ್ನಾಟಕದ ಬಿಜೆಪಿಯಲ್ಲಿದೆ ಇರುವುದು ಖೇದಕರ ಸಂಗತಿ ಎಂದರು.
ಡಾ. ಶಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯರ ಬಲಿದಾನ ಆಯಿತು. ಆದರೆ, ಇವತ್ತಿನ ರಾಜ್ಯ ಬಿಜೆಪಿ ಸ್ಥಿತಿ ನೋಡಿದರೆ ಸದ್ಯಕ್ಕೆ ಸರಿ ಹೋಗೊತ್ತೋ ಇಲ್ಲವೋ ಎನ್ನುವ ಅನುಮಾನ ಇದೆ. ಆದರೂ ಕೂಡ ಅವರೆಲ್ಲರ ತಪಸ್ಸಿಗೆ ಬೆಲೆ ಇದೆ. ಇವತ್ತಲ್ಲ ನಾಳೆ ಸರಿ ಹೋಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಮುಖಂಡರಾದ ವೀರಣ್ಣ ಹಳೇಗೌಡರ, ವಿರೇಶ ಊಂಡೊ0ಡಿ ಇದ್ದರು.