ನೋಡಲ್ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ

11NPN2
ಜಿಲ್ಲಾಧಿಕಾರಿ ನಿತೇಶ ಪಾಟೀಲ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಬಳಿ ವೇದಗಂಗಾ ನದಿಯ ಪ್ರವಾಹ ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ್ ಡಾ. ಮೋಹನ ಭಸ್ಮೆ, ಎಇಇ ಅಪ್ಪಾಸಾಹೇಬ ಪೂಜಾರಿ ಮತ್ತಿತರರು ಇದ್ದಾರೆ.
Published on

ನಿಪ್ಪಾಣಿ: ತಾಲೂಕಿನ ಕೆಲ ಸೇತುವೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ದರ್ಶನ್ ಎಚ್.ವಿ., ಎಸಿ ಸಂತೋಷ ಕಾಮಗೌಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ವೇದಗಂಗಾ ನದಿ ಮತ್ತು ಚಿಕೋತ್ರಾ ನದಿ ಪಾತ್ರದ ಪ್ರವಾಹ ಏರ್ಪಡುವ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲೂಕಿನ ಕೋಡಣಿ, ಯಮಗರ್ಣಿಗೆ ಭೇಟಿ ನೀಡಿದರು.

ಭಿವಶಿ ಗ್ರಾಮದ ಭಿವಶಿ-ಜತ್ರಾಟ ಸೇತುವೆ ಮತ್ತು ಸಿದ್ನಾಳ ಗ್ರಾಮದ ಸಿದ್ನಾಳ-ಅಕ್ಕೋಳ ಸೇತುವೆ ಹಾಗೂ ಪರಿಸರದಲ್ಲಿ ಹೊಲಗದ್ದೆಗಳಿಗೆ ನುಗ್ಗಿದ ನೀರು ಪರಿಶೀಲನೆ ನಡೆಸಿದರು. ತಾಲೂಕಿನಲ್ಲಿ ಕಳೆದ ವರ್ಷ ಸ್ಥಾಪಿಸಿದ ಕಾಳಜಿ ಕೇಂದ್ರಗಳ ಕುರಿತು ಮಾಹಿತಿ ಪಡೆದರು. ಜನ-ಜಾನುವಾರು ಸುರಕ್ಷತೆಯ ಕುರಿತು ಕಟ್ಟೆಚ್ಚರ ವಹಿಸಬೇಕೆಂದು ನೋಡಲ್ ಅಧಿಕಾರಿಗಳಿಗೆ ಆದೇಶಿಸಿದರು. 24 ಗಂಟೆ ಎಲ್ಲ ಅಧಿಕಾರಿಗಳು ಜಾಗೃತರಾಗಿ ಸೇವೆ ಸಲ್ಲಿಸಬೇಕು ಎಂದು ಡಿಸಿ ಸಲಹೆ ನೀಡಿದರು. ತಹಸೀಲ್ದಾರ್ ಡಾ.ಮೋಹನ ಭಸ್ಮೆ, ತಾಪಂ ಇಒ ಮಲ್ಲಿಕಾರ್ಜುನ ಉಳಾಗಡ್ಡಿ, ಎಇಇ ಅಪ್ಪಾಸಾಹೇಬ ಪೂಜಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net