

ಸವದತ್ತಿ: ಸುಂದರ ಭಾರತ ಪ್ರತಿಷ್ಠಾನ ಸರ್ಕಾರಿ ಶಾಲಾ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಗಳ ಅಭಿವದ್ಧಿಗೆ ಸಹಕಾರ ನೀಡುತ್ತಿದ್ದು, ಸವದತ್ತಿ ತಾಲೂಕಿನ 5,000 ವಿದ್ಯಾರ್ಥಿಗಳಿಗೆ 16500 ನೋಟಬುಕ್ ವಿತರಿಸುತ್ತಿದೆ ಎಂದು ಪ್ರತಿಷ್ಠಾನದ ಅಧ್ಯ ಪ್ರತಾಪ ಪರಶಾರ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಶನಿವಾರ ಬೆಂಗಳೂರಿನ ನೀಡ್ ಬೇಸ್ ಇಂಡಿಯಾ ಹಾಗೂ ಸುಂದರ ಭಾರತ ಪ್ರತಿಷ್ಠಾನ ವತಿಯಿಂದ ತಾಲೂಕಿನ 23 ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟಬುಕ್ಗಳನ್ನು ವಿತರಿಸಿ ಮಾತನಾಡಿದರು. ಗ್ರಾಮೀಣ ಬಡಮಕ್ಕಳ ಗುಣಮಟ್ಟದ ಶಿಣಕ್ಕೆ ಅನುಕೂಲವಾಗಲೆಂದು ಸುಮಾರು 8 ಲ ರೂಪಾಯಿ ಮೌಲ್ಯದ ನೋಟಬುಕ್ ನೀಡಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದರು.
ಸಮಾಜ ಸೇವಕ ಮಲ್ಲು ಬೀಳಗಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಸುಂದರ ಪ್ರತಿಷ್ಠಾನದ ಕೊಡುಗೆ ಅತ್ಯಮೂಲ್ಯವಾಗಿದ್ದು, ಬಡ ಮಕ್ಕಳಿಗೆ ಸಹಕಾರಿಯಾಗಿದೆ ಎಂದರು. ಶಿಕ್ಷಣ ಸಂಯೋಜಕ ಗುರುನಾಥ ಕರಾಳೆ , ಎ.ಬಿ. ಕೊಪ್ಪದ, ಎಸ್.ವಿ. ಜೋಶಿ, ಪ್ರಸನ್ನ, ತಾಲೂಕಿನ ಶಾಲಾಮಕ್ಕಳು ಹಾಗೂ ಶಿಕರು, ವಿದ್ಯಾರ್ಥಿಗಳು ಇದ್ದರು.