ನೋಟಿಸ್​ ನೀಡದೆ ಒಡವೆ ಹರಾಜು?

16
Published on

ಖಾಸಗಿ ಬ್ಯಾಂಕ್​ನಿಂದ ವಂಚನೆ ಆರೋಪ, ವಿವಿಧ ಸಂಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ

ಕುಣಿಗಲ್​: ಅಡಮಾನ ಇಟ್ಟಿರುವ ಚಿನ್ನದ ಒಡವೆಗಳನ್ನು ನೋಟಿಸ್​ ನೀಡದೆ ಹರಾಜು ಮಾಡಿ ಗ್ರಾಹಕರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಖಾಸಗಿ ಬ್ಯಾಂಕ್​ ಮುಂದೆ ವಿವಿಧ ದಲಿತಪರ ಸಂಟನೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟಿಸಿದರು.

ಅಖಿಲ ಭಾರತ ಡಾ.ಜಿ ಪರಮೇಶ್ವರ ಯುವ ಸೆನ್ಯದ ಅಧ್ಯ ನಗುತಾ ರಂಗನಾಥ್​ ನೇತತ್ವದಲ್ಲಿ ಪಟ್ಟಣದ ಬ್ಯಾಂಕ್​ ಮುಂದೆ ಪ್ರತಿಭಟನೆ ನಡೆಸಿ ಘೋಷಣೆ ಕೂಗಲಾಯಿತು.

ನಂತರ ಮಾತನಾಡಿದ ನಗುತಾ ರಂಗನಾಥ್​, ಪಟ್ಟಣದ ಹೊಸ ಬಡಾವಣೆ ವಾಸಿ ಮೋಹನ್​ ಕುಮಾರ್​ ಎಂಬುವರು ಮನೆ ನಿರ್ಮಾಣ ಮಾಡಲು ಬ್ಯಾಂಕ್​ ಶಾಖೆಯಲ್ಲಿ ಒಡವೆ ಅಡಮಾನ ಇಟ್ಟು ಸಾಲ ಪಡೆದುಕೊಂಡಿದ್ದರು. ಬ್ಯಾಂಕಿನವರ ಮಾಹಿತಿ ಮೇರೆಗೆ ಮೋಹನ್​ ಕುಮಾರ್​ ಬಡ್ಡಿ ಕಟ್ಟಲು ಮುಂದಾದಾಗ ಒಡವೆಗಳನ್ನು ಹರಾಜು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನೋಟಿಸ್​ ಕೊಡದೆ ಹರಾಜು ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದರೆ ಬಡ್ಡಿ ಕಟ್ಟಲು ಯೋಗ್ಯತೆ ಇಲ್ಲದ ಮೇಲೆ ಸಾಲ ಏಕೆ ಪಡೆದುಕೊಂಡಿದ್ದೀರಾ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಜತೆಗೆ ಬ್ಯಾಂಕ್​ನಿಂದ ತೆರಳದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಕುಣಿಗಲ್​ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ. ಆದರೂ ಈವರೆಗೆ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು.

ಈ ಖಾಸಗಿ ಬ್ಯಾಂಕಿನವರು ಇದೇ ರೀತಿ ಸಾಕಷ್ಟು ಗ್ರಾಹಕರ ಒಡವೆಗಳನ್ನು ಹರಾಜು ಮಾಡಿ ವಂಚನೆ ಮಾಡುತ್ತಿದ್ದಾರೆ. ಬಡವರ ಜೀವನದ ಜತೆ ಆಟವಾಡುತ್ತಿರುವ ಬ್ಯಾಂಕ್​ ಶಾಖೆ ಸಿಬ್ಬಂದಿ ಹಾಗೂ ಮ್ಯಾನೇಜರ್​ ವಿರುದ್ಧ ಕ್ರಮ ಕೆಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net