ನೊಂದವರಿಗೆ ರಕ್ಷಣೆ ನೀಡುವುದೇ ಪೊಲೀಸರ ಕರ್ತವ್ಯ

ಕಿಕ್ಕೇರಿಯ ನೂತನ ಇನ್‌ಸ್ಪೆಕ್ಟರ್ ರೇವತಿ ಅವರನ್ನು ಸೋಮವಾರ ಚಿತ್ರದುರ್ಗ ರಿದ್ಧಿ ಫೌಂಡೇಷನ್ ಟ್ರಸ್ಟ್ ಮಮತಾ, ಶೋಭಾ, ಶಿವರುದ್ರಮ್ಮ, ಶಾಂತಮ್ಮ, ಸೌಜನ್ಯಾ, ಕೆ.ವಿ. ಅರುಣಕುಮಾರ್ ಅಭಿನಂದಿಸಿದರು.
28-kkr,2(8=23
Published on

ಕಿಕ್ಕೇರಿ: ನೊಂದವರು, ಅಬಲೆಯರಿಗೆ ಮೊದಲು ರಕ್ಷಣೆ ನೀಡುವುದು ತಮ್ಮ ಇಲಾಖೆ ಕರ್ತವ್ಯವಾಗಿದೆ ಎಂದು ನೂತನ ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.


ಪಟ್ಟಣದಲ್ಲಿ ಸೋಮವಾರ ಚಿತ್ರದುರ್ಗ ರಿದ್ಧಿ ಫೌಂಡೇಷನ್ ಟ್ರಸ್ಟ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ನೊಂದವರು, ಅಸಕ್ತರು ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಸಮಸ್ಯೆ ತಿಳಿಸಬೇಕು. ಕಾನೂನು ಗೌರವಿಸುವ ಎಲ್ಲರಿಗೂ ರಕ್ಷಣೆ ಇದೆ. ಸಣ್ಣ-ಪುಟ್ಟ ಜಗಳವನ್ನು ದೊಡ್ಡದು ಮಾಡಿಕೊಳ್ಳದೆ, ಶಾಂತಿ ಸುವ್ಯವಸ್ಥೆಗೆ ಸಹಕರಿಸುವಂತೆ ತಿಳಿಸಿದರು.


ಮಹಿಳೆಯರ ಮೇಲೆ ದೌರ್ಜನ್ಯ, ವೃದ್ಧರಿಗೆ ಹಿಂಸೆ ನೀಡದೆ, ಮುಪ್ಪಿನಲ್ಲಿ ನೆಮ್ಮದಿಯಾಗಿ ಬದುಕಲು ನೆರವಾಗಬೇಕು. ಆಸ್ತಿಗಾಗಿ ಹಿಂಸೆ ನೀಡಿದರೆ ಸಮಸ್ಯೆಗಳನ್ನು ತಾವೇ ಮೇಲೆ ಹಾಕಿಕೊಂಡಂತೆ ಎಂಬ ಅರಿವು ಇರಬೇಕು. ಸಮಾಜದ ಶಾಂತಿ ಕದಡುವ ಕೆಲಸವಾಗಬಾರದು ಎಂದು ಎಚ್ಚರಿಸಿದರು.
ಚಿತ್ರದುರ್ಗ ರಿದ್ಧಿ ಫೌಂಡೇಷನ್ ಟ್ರಸ್ಟ್ ಮಮತಾ, ಶೋಭಾ, ಶಿವರುದ್ರಮ್ಮ, ಶಾಂತಮ್ಮ, ಸೌಜನ್ಯಾ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ವಿ. ಅರುಣಕುಮಾರ್, ಮಾಜಿ ಸದಸ್ಯ ಮಹದೇವು, ಸ್ಟುಡಿಯೋ ಗೋವಿಂದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net