ನೊಂದವರಿಗೆ ನೋವಾಗುವಂತೆ ಮಾತನಾಡಿ

IMG-20240421-WA0082
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಂಥ ಸೂಕ್ಷ್ಮ ಪ್ರಕರಣಗಳಲ್ಲಿ ಮುಖ್ಯಮಂತ್ರಿ, ಗೃಹ ಸಚಿವ, ಯಾರೇ ಆಗಲಿ ನೊಂದವರಿಗೆ ಇನ್ನಷ್ಟು ನೋವಾಗುವಂತೆ ಮಾತನಾಡಬಾರದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷೀ ಚೌಧರಿ ಹೇಳಿದರು.

ಇತ್ತೀಚೆಗೆ ಹತ್ಯೆಗೀಡಾದ ಹುಬ್ಬಳ್ಳಿ ಯ ನೇಹಾಳ ಮನೆಗೆ ಭಾನುವಾರ‌ ಸಂಜೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇಂಥ ಪ್ರಕರಣವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಹೆಣ್ಣು ಜೀವಕ್ಕೆನೋವಾದಾಗ, ಹತ್ಯೆಯಂಥ ಪ್ರಕರಣದಲ್ಲಿ ಜಾತಿ, ಧರ್ಮ, ರಾಜಕೀಯ ತರಬಾರದು. ಹೆಣ್ಣು ಹೆಣ್ಣೇ. ಸ್ವಾರ್ಥಕ್ಕೆ ಬಳಸಿಕೊಂಡು ಮಹಿಳೆಗೆ ಅವಮಾನ ಮಾಡಬೇಡಿ ಎಂದರು.

ನೇಹಾ ಹತ್ಯೆ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ಗೆ ಒಪ್ಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ. ಈ ಪ್ರಕರಣದಲ್ಲಿ ನೇಹಾ ಅವರ ಕುಟುಂಬದವರಿಗೆ ಆದಷ್ಟು ಬೇಗ ನ್ಯಾಯ ಸಿಗಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net