

ಸಾಲಿಗ್ರಾಮ: ಸಂಘ-ಸಂಸ್ಥೆಗಳು ನೊಂದವರ ನೆರವಿಗೆ ನಿಂತು ಅವರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿ ಕೊಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಬೇಕು ಎಂದು ಶಾಸಕ ಸಾ.ರಾ.ಮಹೇಶ್ ಸಲಹೆ ನೀಡಿದರು.
ಸಾಲಿಗ್ರಾಮದಲ್ಲಿ ಗುರುವಾರ ಶ್ರೀರಂಗನಾಥೇಶ್ವರ ಯುವಕರ ಸ್ವಸಹಾಯ ಸಂಘ ಉದ್ಘಾಟಿಸಿ ಮಾತನಾಡಿದರು.
ಸಂಘದ ವತಿಯಿಂದ ಸಮಾಜಮುಖಿ ಹಾಗೂ ಸರ್ಕಾರದ ಸವಲತ್ತುಗಳ ಬಗೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು, ಸ್ವಂತ ದುಡಿಮೆಯಲ್ಲಿ ಒಂದಷ್ಟು ಸಹಾಯ ಮಾಡುವ ಮೂಲಕ ಸಮಾಜ ಸೇವೆ ಮಾಡಿ ಎಂದು ಸಂಘದ ಸದಸ್ಯರಿಗೆ ಸಲಹೆ ನೀಡಿದರು.
ಸಂಘದ ವತಿಯಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಮತ್ತು ಸಾಧನೆ ಮಾಡಿರುವವರನ್ನು ಸನ್ಮಾನಿಸಲಾಯಿತು.
ಮಹಿಳಾ ಸಂಘಗಳಂತೆ ಪುರುಷರ ಸ್ವ ಸಹಾಯ ಸಂಘವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಸಂಘದ ಅಧ್ಯಕ್ಷ ಸೀತಣ್ಣ ಭರವಸೆ ನೀಡಿದರು.
ಇನ್ಸ್‌ಪೆಕ್ಟರ್ ಶ್ರೀಕಾಂತ್, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ರತ್ನಮ್ಮ, ಸಂಘದ ಉಪಾಧ್ಯಕ್ಷ ರಾಜೇಗೌಡ, ಕಾರ್ಯದರ್ಶಿ ತಿಮ್ಮೇಗೌಡ, ಖಜಾಂಚಿ ರಘು, ಸದಸ್ಯರಾದ ಜಲೇಂದ್ರ, ಶಿವಮೂರ್ತಿ, ಅಶೋಕ್, ಕಿರಣ್, ರಾಜು, ನಟೇಶ್, ಗಿರೀಶ್, ರಾಮ, ಸೋಮು, ಗಿರೀಶ್, ನಾರಾಯಣ್, ನರಸಿಂಹ, ಸಂತೋಷ್, ಶಿವರಾಜ್, ಜಗದೀಶ್, ಕುಮಾರ್ ಇದ್ದರು.