

ಕೊಡೇಕಲ್: ಸಮಾಜದಲ್ಲಿ ಶೋಷಣೆಗೆ ಒಳಗಾಗುವವರ ಕಣ್ಣಿರು ಒರೆಸುವ ಮೂಲಕ ನೊಂದವರ ಧ್ವನಿಯಾಗಿ ನಮ್ಮ ಸಂಘದ ಕರ‍್ಯಕರ್ತರು ಕೆಲಸ ಮಾಡಬೇಕು ಎಂದು ಹುಣಸಗಿ ತಾಲೂಕು ಮಹರ್ಷಿ ವಾಲ್ಮೀಕಿ ಬೇಡರ ಸಂಘದ ಗೌರವಾಧ್ಯಕ್ಷ ಹಣಮಂತ್ರಾಯ ದೊರಿ ಹೇಳಿದರು. ಗ್ರಾಮದ ಪ್ರವಾಸಿ ಮಂದಿರಲ್ಲಿ ಬುಧವಾರ ಕರೆದಿದ್ದ ಹುಣಸಗಿ ತಾಲೂಕು ಮಹರ್ಷಿ ವಾಲ್ಮೀಕಿ ಬೇಡರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ತಾಲೂಕು ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಬಸವರಾಜ ಜಿರಾಳ (ಅಧ್ಯಕ್ಷ), ಭೀಮಣ್ಣ ದೊರಿ, ಆಂಜನೇಯ ಗೊಳಸಂಗಿ, ಸಾಹೇಬಗೌಡ ಬೇವಿನಗಿಡ (ಉಪಾಧ್ಯಕ್ಷರು), ಹಣಮಪ್ಪ (ಕರ‍್ಯದರ್ಶಿ), ವೀರಭದ್ರ ಅಂತರಗAಗಿ, ದುರ್ಗಪ್ಪ ಕನ್ನಳ್ಳಿ, ಹಣಮಂತ್ರಾಯ ಪೊಲೀಸ್ ಪಾಟೀಲ್, ಪರಶುರಾಮ (ಸಹ ಕರ‍್ಯದರ್ಶಿಗಳು), ನಂದಣ್ಣ (ಖಜಾಂಚಿ), ಬಸನಗೌಡ, ಬಲಭೀಮ, ಯಂಕೋಬ, ಸಾಯಬಣ್ಣ, ನಿಂಗಣ್ಣ, ಸಾಯಬಣ್ಣ, ಹಣಮಪ್ಪ, ಸಾಹೇಬಗೌಡ, ಹಣಮಂತ್ರಾಯ, ಮರೆಣ್ಣ, ದುರಗಪ್ಪ, ಹನುಮಪ್ಪ, ಬಾಪುಗೌಡ, ಈರಣ್ಣ ಬಸವಣ್ಣೆಪ್ಪ ಅವರನ್ನು ಆಯ್ಕೆ ಮಾಡಲಾಯಿತು.