ನೈಸರ್ಗಿಕ ಸಂಪನ್ಮೂಲ ಕಾಪಾಡಿ

WhatsApp Image 2024-07-31 at 4.41.50 PM
Published on

ಬಳ್ಳಾರಿ : ಪರಿಸರ ಉಳಿಸಲು ನೈಸರ್ಗಿಕ ಸಂಪನ್ಮೂಲ ಕಾಪಾಡಬೇಕಾದ ಅವಶ್ಯಕತೆಯಿದೆ ಎಂದು ಅರಣ್ಯ ಇಲಾಖೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್ ಹೇಳಿದರು.
ನಗರದ ಬೆಳಗಲ್ ಕ್ರಾಸ್‌ನ ಸಸ್ಯ ಕ್ಷೇತ್ರದಲ್ಲಿ ಅರಣ್ಯ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ರೇಂಜರ್ ದಿನ ಹಾಗೂ ಪ್ರಕೃತಿವನ ಉದ್ಘಾಟನೆ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಣೆ ಮಾಡಬೇಕು. ಹಾಗೆಯೇ ಪರಿಸರ ಸಂರಕ್ಷಣೆ ಮಾಡುವವರನ್ನು ಗೌರವಿಸಬೇಕು. ಇತ್ತೀಚಿನ ಹವಾಮಾನ ಬದಲಾವಣೆಯಿಂದ ವೈಜ್ಞಾನಿಕವಾಗಿ ಗಿಡ ಮರ ನೆಡಬೇಕು. ಯಾವ ದೇಶ ನೈಸರ್ಗಿಕ ಸಂಪನ್ಮೂಲಗಳ ಉಳಿಸಿಕೊಳ್ಳಲಾಗಿದೆ ಅಂತಹ ದೇಶಗಳು ಇಂದು ಸುಭಿಕ್ಷೆ ಆಗಿವೆ. ದೇಶ ಹಾಗೂ ಮಾನವ ಸಂಪನ್ಮೂಲವನ್ನು ಪ್ರಾಣ ಪಣಕಿಟ್ಟು ಯಾರು ಉಳಿಸಿಕೊಳ್ಳುತ್ತಾರೋ ಅವರನ್ನು ರೇಂಜರ್ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಎಚ್ ಸೂರ್ಯವಂಶಿ ಮಾತನಾಡಿ, ಸಾಮಾನ್ಯವಾಗಿ ನೈಸರ್ಗಿಕವಾಗಿ ಸಂರಕ್ಷಿತ ಪ್ರದೇಶಗಳನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ದಿನದಂದು ರೇಂಜರ್‌ಗಳ ಪ್ರಮುಖ ಕೆಲಸವನ್ನು ಬೆಂಬಲಿಸಿ ಗೌರವಿಸಲಾಗುತ್ತದೆ. ಕರ್ತವ್ಯದ ವೇಳೆ ಪ್ರಾಣ ಕಳೆದಕೊಂಡ ರೇಂಜರ್‌ಗಳಿಗೆ ಶ್ರದ್ಧಾಂಜಲಿ ಕೂಡ ಸಲ್ಲಿಸಲಾಗುತ್ತದೆ ಎಂದರು.
ಇದೇ ವೇಳೆ ಅರಣ್ಯ ಇಲಾಖೆಯ ವಿಶೇಷ ಅಂಚೆ ಲಕೋಟಿಯನ್ನು ಬಿಡುಗಡೆ ಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net