ನೈಸರ್ಗಿಕ ಸಂಪನ್ಮೂಲ ಉಳಿವಿಗೆ ಕೈಜೋಡಿಸಿ

WCD
Published on

ಚಿತ್ರದುರ್ಗ: ನೈಸರ್ಗಿಕ ಸಂಪನ್ಮೂಲ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಹೇಳಿದರು.

ಜಿಲ್ಲಾ ಬಾಲಭವನ ಆವರಣದಲ್ಲಿ ಬುಧವಾರ ಇಲಾಖೆ, ಜಿಲ್ಲಾ ಬಾಲಭವನ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಕೃತಿ ಬೆಲೆ ಕಟ್ಟಲಾಗದ ಸಂಪನ್ಮೂಲ. ಆದ್ದರಿಂದ ಪರಿಸರದ ಕುರಿತು ಹೆಚ್ಚು ಕಾಳಜಿ ವಹಿಸಬೇಕಿದೆ. ಸಸಿಗಳನ್ನು ಶಿಶುವಿನಂತೆ ರಕ್ಷಿಸಿದರೆ, ಹೆಮ್ಮರವಾಗಿ ಬೆಳೆದು ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರಾ, ತಾಲೂಕು ಸಿಡಿಪಿಒ ವೀಣಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಬಾಲಭವನದ ವ್ಯವಸ್ಥಾಪಕ ಸುರೇಶ್, ಕಚೇರಿ ವ್ಯವಸ್ಥಾಪಕ ರುದ್ರಪ್ಪ, ಪ್ರಮೋದ್‌ಕುಮಾರ್, ಸಾಧಿಕ್ ಉಲ್ಲಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಾಸಪ್ಪ, ಸಂಯೋಜಕರಾದ ಡಿ.ಶ್ರೀಕುಮಾರ್, ಸಿಬ್ಬಂದಿ ಪಿ.ಜಿ.ರವೀಂದ್ರ, ವಿನಯ್‌ಕುಮಾರ್, ದೀಪಾ, ಗೀತಾ, ಅರುಂಧತಿ, ಚೇತನ್, ಪ್ರೇಮಾ, ಭಾಗ್ಯಮ್ಮ, ಅನಿಲ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net