ನೈತಿಕತೆ ಎಲ್ಲೆ ಮೀರದಿರಲಿ

8Huk1 NARI DAY
Published on

ಹುಕ್ಕೇರಿ: ಸಹನಾ ಮೂರ್ತಿಯಾದ ಮಹಿಳೆ ಇಂದಿನ ದಿನಗಳಲ್ಲಿ ತವರು ಮನೆಯ ಆಸ್ತಿಯಲ್ಲಿ ಪಾಲು ಕೇಳುತ್ತಿರುವುದು ಹಾಗೂ ಗಂಡನ ಮೇಲೆ ದೌರ್ಜನ್ಯ ನಡೆಸುವ ಸಂಗತಿಗಳು ಅವಳ ನೈತಿಕತೆ ಪ್ರಶ್ನಿಸುವಂತಾಗಿದೆ. ಪುರುಷರ ಜತೆಗೆ ಸರಿಸಮನಾಗಿ ದುಡಿಯುವ ಮಹಿಳೆ ನೈತಿಕತೆ ಎಲ್ಲೆ ಮೀರಿ ಬದುಕಬಾರದು ಎಂದು ಲೇಖಕಿ ವೇಣುತಾಯಿ ಚೌಗಲಾ ಹೇಳಿದರು.

ಸ್ಥಳೀಯ ಮಹಾವೀರ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಜಯಮಾಲಾ ನಿಲಜಗಿ ಬಿ.ಸಿ.ಎ. ಮತ್ತು ಬಿ.ಕಾಂ. ಡಿಗ್ರಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಸ್ವೀಕರಿಸಿ ಮಾತನಾಡಿದರು.

ಸಂಯೋಜಕಿ ಮುತ್ತವ್ವ ಅರಳಿಕಟ್ಟಿ ಮಾತನಾಡಿದರು. ಮಹಿಳಾ ದಿನದ ನಿಮಿತ್ತ ನಡೆದ ರಂಗೋಲಿ ಮತ್ತು ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಪದ್ಮಶ್ರೀ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಅನುಪಮಾ ಕಬಾಡಗಿ, ಗೀತಾ ಚೌಗಲಾ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಶಿಕ್ಷಣ ಸಂಸ್ಥೆ ವೈಸ್ ಚೇರ್ಮನ್ ಪ್ರಜ್ವಲ ನಿಲಜಗಿ ಇದ್ದರು. ಪ್ರೊ. ಸೋಹಿಲ್ ಹಿಪ್ಪರಗಿ ಸ್ವಾಗತಿಸಿದರು. ಸಂಜನಾ ಶೇಗುಣಸಿ ನಿರೂಪಿಸಿದರು. ಶ್ರುತಿ ಮುತ್ನಾಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net