

ಕಲಬುರಗಿ: ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ರೂ. ಹಗರಣ, ಮೂಡಾದಲ್ಲಿ ನಿವೇಶನ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆ ಹೊತ್ತು, ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕಿ ಡಾ.ಸುಧಾ ಹಾಲಕಾಯಿ ಆಗ್ರಹಿಸಿದರು.
ಸ್ವತಃ ಸಿದ್ದರಾಮಯ್ಯನವರೇ ವಿಧಾನಸೌಧದಲ್ಲಿಯೇ ೮೭ ಕೋಟಿ ರೂ. ಹಗರಣ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. ಅವರ ಮೂಗಿನ ನೇರಕೆಕ ನಡೆದ ಹಗರಣದಲ್ಲಿ ಸಿಎಂ ಜವಾಬ್ದಾರಿ ಹೆಚ್ಚಾಗಿದೆ. ಅವರ ಸೂಚನೆ ಇಲ್ಲದೆ ಬೇರೆ ಖಾತೆಗೆ ಹಣ ವರ್ಗಾವಣೆ ಸಾಧ್ಯವಿಲ್ಲ. ನೇರ ಹೊಣೆಗಾರಿಕೆ ಮುಖ್ಯಮಂತ್ರಿಗಳದ್ದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಹೈಕಮಾಂಡ್‌ನ್ನು ಒಲೈಸಲು ಕರ್ನಾಟಕದ ದಲಿತರ ಹಣ ಲೂಟಿ ಮಾಡಿದೆ. ಮೈಸೂರಿನ ಮುಡಾ ಹಗರಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಿದ್ದರಾಮಯ್ಯ ರಾಜಕೀಯ ಸ್ಥಾನ ದುರುಪಯೋಗ ಪಡೆಸಿಕೊಂಡು ಸರ್ಕಾರದ ಒಡೆತನದಲ್ಲಿದ್ದ ಜಾಗ ಭೂಸ್ವಾಧೀನದಿಂದ ಕೈಬಿಟ್ಟಂತೆ ಮಾಡಿ, ಕೋರ್ಟ್ ಮೂಲಕ ಹಣ ತೆಗೆದುಕೊಂಡAತೆ ಭ್ರಷ್ಟಾಚಾರ ಮಾಡಿದ್ದಾರೆ. ಕಾಂಗ್ರೆಸ್‌ನ ಡಿಎನ್‌ಎನ¯್ಲÉ ಭ್ರಷ್ಟಾಚಾರ ಇದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದುವರೇ ವರ್ಷವಾದರೂ ಅಭಿವೃದ್ಧಿ ಯೋಜನೆಗಳಿಗೆ ಕಾಯಕಲ್ಪ ನೀಡಿಲ್ಲ. ಬಿಜೆಪಿ ಹೇಳಿದಂತೆ ಗ್ಯಾರಂಟಿ ಲೋಕಸಭೆ ಚುನಾವಣೆ ನಂತರ ಸ್ಥಗಿತ ಎನ್ನುವ ಮಾತು ನಿಜವಾಗಿದ್ದು, ಗೃಹಲಕ್ಷಿö್ಮÃ ಸ್ಥಗಿತವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಟದ ಜಿ¯್ಲÁ ಸಹ ಸಂಚಾಲಕ ಮಲ್ಲು ಬೆನಕನಳ್ಳಿ, ಅನೀಲಕುಮಾರ ಸಿನ್ನೂರಕರ್, ಹರ್ಷಾ ಇತರರಿದ್ದರು.