ನೈತಿಕ ರಾಜಕಾರಣಕ್ಕೆ ಗಾಂಧೀಜಿ,ಶಾಸ್ತ್ರೀಜಿ ಮಾದರಿ

CTD D IST ADMN GANDI JYANTI------
Published on

ಚಿತ್ರದುರ್ಗ: ಸತ್ಯ,ಅಹಿಂಸೆ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರು,ಬ್ರಿಟಿಷರ ವಿರುದ್ಧ ಈ ಎರಡೂ ತತ್ವ ಗಳನ್ನು ಅಸ್ತ್ರಗಳನ್ನಾಗಿ ಬಳಸಿ ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ್ದರು ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ಜಿಲ್ಲಾಡಳಿತ, ಜಿಪಂ,ನಗರಸಭೆ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಗುರುವಾರ ಡಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ‌್ಯಕ್ರಮದಲ್ಲಿ ಮಾತನಾಡಿ,ಗಾಂಧೀಜಿ ಹಾದಿಯಲ್ಲೇ ಶಾಸ್ತ್ರೀಜಿ ಸಾಗಿದ್ದರು. ಇವರಿಬ್ಬರೂ ನೈತಿಕ ರಾಜಕಾರಣಕ್ಕೆ ಮಾದರಿಯಾಗಿದ್ದರು.

ಗಾಂಧೀಜಿ ಜೀವನವೇ ನಮಗೆಲ್ಲ ಸಂದೇಶ. ನಾವೆಲ್ಲರು ಗಾಂಧೀ ಮಾರ್ಗದಲ್ಲಿ ಸಾಗಿದರೆ ನೈತಿಕವಾಗಿ ಬಲವಾಗಿರುವಂಥ ಸ್ವಸ್ಥ ಸಮಾ ಜ ನಿರ್ಮಿಸಬಹುದು. ಪ್ರಸ್ತುತ ಜಗತ್ತಿನಾದ್ಯಂತ ಹಿಂಸೆ ತಾಂಡವವಾಡುತ್ತಿದೆ.ಯುವ ಜನರಿಂದು ಸತ್ಯ ಸಂಗತಿಗಳಿಂದ ದೂರವಾಗಿ,ಭ್ರ ಮಾಲೋಕದಲ್ಲಿದ್ದಾರೆ.

ಓದು ಕೆಲಸ ಪಡೆಯುವ ಮಾರ್ಗವಾಗಿದೆ. ಬುದ್ದ,ಬಸವ,ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗದಲ್ಲಿ ಯುವ ಜನ ರು ಸಾಗಬೇಕಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಶಾಸ್ತ್ರಿ ಅವರ ವ್ಯಕ್ತಿತ್ವ ಮಹೋನ್ನತವಾದುದು.ಅವರ ಪ್ರಾಮಾ ಣಿಕತೆ ಹಾಗೂ ಕರ್ತವ್ಯಪರತೆ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ‌್ಯ ಡಾ.ಎಚ್.ಗುಡ್ಡದೇಶ್ವರಪ್ಪ,ಜಾಗತಿಕ ಮಟ್ಟದಲ್ಲಿ ಹಲವು ನಾಯಕರು ಗಾಂಧಿ ಪ್ರಭಾವಕ್ಕೆ ಒಳ ಗಾಗಿದ್ದಾರೆ. ಸರ್ವರ ಕಲ್ಯಾಣಕ್ಕಾಗಿ ಶ್ರಮಿಸಿದ ಅವರು ಸಮಾಜ ಸುಧಾರಕ,ಸಂತ,ದಾರ್ಶನಿಕರಾಗಿದ್ದಾರೆ. ಲಾಲ್‌ಬಹದ್ದೂರ್‌ಶಾಸ್ತ್ರಿ ಅವ ರು,ರಾಜಕೀಯ ಎನ್ನುವುದು ಸೇವೆ,ರಾಜಕೀಯ ಸೇವೆಗೆ ಪ್ರಾಮಾಣಿಕತೆ ಸ್ಪರ್ಶ ಬೇಕೆಂದಿದ್ದ ಮಹಾನ್ ಚೇತನವಾಗಿದ್ದಾರೆ ಎಂದರು. ಕು ಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ ಮಾತನಾಡಿದರು.

ಬಹುಮಾನ ವಿತರಣೆ

ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಇಲಾಖೆ ಜಿಲ್ಲೆಯ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ,ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕಾರ‌್ಯ ಕ್ರಮದಲ್ಲಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಚಿತ್ರದುರ್ಗ ಸಂತಜೋಸೆಫ್ ಕಾನ್ವೆಂಟ್ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು. ಮೀನಾಕ್ಷಿ ಭಟ್ ಸಂಗಡಿಗರು ಗೀತ ಗಾಯನ ನಡೆಸಿಕೊಟ್ಟರು. ರಂಗನಿರ್ದೇಶಕ ಕೆಪಿಎಂ ಗಣೇ ಶಯ್ಯ ನಿರೂಪಿಸಿದರು.

ಸ್ವಚ್ಛತಾ ಶ್ರಮದಾನ

ವೇದಿಕೆ ಕಾರ‌್ಯಕ್ರಮಕ್ಕೂ ಮುನ್ನ ನಗರದ ಒನಕೆ ಓಬವ್ವ ವೃತ್ತದಲ್ಲಿ ಸ್ವಚ್ಛತೆ ಕಾರ‌್ಯದ ಮೂಲಕ ಶ್ರಮದಾನ ಮಾಡಲಾಯಿತು. ನಗರಸಭೆ ಅಧ್ಯಕ್ಷೆ ಎಂ.ಪಿ.ಅನಿತಾರಮೇಶ್,ಉಪಾಧ್ಯಕ್ಷೆ ಶಕೀಲಾಬಾನು,ಆಯುಕ್ತೆ ಎಸ್.ಲಕ್ಷ್ಮೀ, ಎಸಿ ಮೆಹಬೂಬ್ ಜಿಲಾನಿ ಖುರೇಷಿ,ಜಿಪಂ ಉಪ ಕಾರ‌್ಯದರ್ಶಿ ಡಾ.ರಂಗಸ್ವಾಮಿ,ಎಎಸ್‌ಪಿ ಶಿವಕುಮಾರ್,ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮಾಹಾನಗಲ್,ಜಿಲ್ಲಾ ವಾರ್ತಾ ಧಿಕಾರಿ ಬಿ.ವಿ. ತುಕಾರಾಂರಾವ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್,ಡಿಡಿಪಿಐ ಎಂ.ಆರ್. ಮಂಜುನಾಥ್,ಡಿಡಿಪಿಯು ಕೆ.ತಿಮ್ಮಯ್ಯ,ಸಮಾಜ ಕಲ್ಯಾಣಾ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net