

ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ನೀಡಲಾಗುವ ವಿವಿಧ ಸೌಲಭ್ಯ ಪಡೆಯಲು ಕುಟುಂಬದ ಮೃತರ ಹೆಸರಿನಲ್ಲಿರುವ ಪಹಣಿಗಳನ್ನು ನೈಜ ವಾರಸುದಾರರಿಗೆ ಪೌತಿ ವಾರಸ್ಸು ಹಕ್ಕು ಬದಲಾವಣೆ ಮಾಡಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಕಂದಾಯ ಇಲಾಖೆ ಪ್ರಗತಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಹಣಿ ದಾಖಲೆಯಲ್ಲಿ ಮೃತಪಟ್ಟ ಖಾತೆದಾರರ ಹೆಸರಿದ್ದರೆ ಸಂಬಂಧಪಟ್ಟ ನೈಜ ವಾರಸುದಾರರು ಪೌತಿ ವಾರಸು ಖಾತೆಯನ್ನು ಶೀಘ್ರವಾಗಿ ಮಾಡಿಸಿಕೊಳ್ಳುವ ಬಗ್ಗೆ ಎಲ್ಲ ತಾಲೂಕು ತಹಸೀಲ್ದಾರ್ರು
ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕೃಷಿ ಸೌಲಭ್ಯಗಳಿಗಾಗಿ ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್ ಸೀಡಿಂಗ್ ಹಾಗೂ ಇ-&ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೃತಪಟ್ಟಿರುವ ಖಾತೆದಾರರ ವಾರಸುದಾರರು ಮಾಹಿತಿಯನ್ನು ತಂತ್ರಾಂಶದಲ್ಲಿ ಕಾಲೋಚಿತಗೊಳಿಸಬೇಕೆಂದು ತಿಳಿಸಿದರಲ್ಲದೆ, ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೈಜ ವಾರಸುದಾರರಿಗೆ ತಲುಪಿಸಲು ಸಾಧ್ಯವಾಗುತ್ತದೆ. ಮೃತರ ಹೆಸರಿನಲ್ಲಿಯೇ ಪಹಣಿಯಲ್ಲಿರುವ ನಮೂದುಗಳು ಮುಂದುವರೆದರೆ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದರು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಅರ್ಹ ಪಹಣಿ ಖಾತೆದಾರರು ಪವತಿ ವಾರಸ್ಸು ಮೂಲಕ ತಮ್ಮ ಪಹಣಿಗಳನ್ನು ಕಾಲೋಚಿತಗೊಳಿಸಿಕೊಳ್ಳಬೇಕು ಎಂದರಲ್ಲದೆ, ಜಿಲ್ಲೆಯ ಎಲ್ಲ ತಾಲೂಕು ಅಭಿಲೇಖಾಲಯಗಳಲ್ಲಿ ದಾಖಲೆಗಳ ಡಿಜಿಟೈಜೇಷನ್ ಕಾರ್ಯ ಪ್ರಗತಿಯಲ್ಲಿದ್ದು, ಸಾರ್ವಜನಿಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಜಮೀನಿನ ದಾಖಲೆ ಪಡೆಯಲು ಅವಕಾಶವಿದೆ ಎಂದರು.
ಕಂದಾಯ ಇಲಾಖೆಯಲ್ಲಿ ಬಗರ್ ಹುಕುಂ, ದುರಸ್ತು, ಹಕ್ಕುಪತ್ರ ಸಂಬಂಧ ಬಾಕಿ ಇರುವ ಅರ್ಜಿಗಳನ್ನು 2 ತಿಂಗಳೊಳಗಾಗಿ ನೈಜ ದಾಖಲೆಗಳನ್ನು ಪರಿಶೀಲಿಸಿ ರೈತರಿಗೆ ಪಹಣಿ ಖಾತೆಗಳನ್ನು ಮಾಡಿಕೊಡಬೇಕು ಎಂದು ಎಲ್ಲ ತಹಸೀಲ್ದಾರ್ಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಡಿಡಿಎಲ್ಆರ್ ನಿರಂಜನ್, ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್ರು ಇದ್ದರು.