ನೈಋತ್ಯ ರೈಲ್ವೆ ನೌಕರರಿಗೆ ‘ಶ್ರಮವೀರ’ ಪ್ರಶಸ್ತಿ ವಿತರಣೆ

h6-Sramaveer
Published on

ಹುಬ್ಬಳ್ಳಿ: ಸ್ವಚ್ಛ ಭಾರತ ಯೋಜನೆ ಅಂಗವಾಗಿ ನೈಋತ್ಯ ರೈಲ್ವೆ ವಲಯ ಹಮ್ಮಿಕೊಂಡಿರುವ ಶ್ರಮದಾನದಲ್ಲಿ ಪಾಲ್ಗೊಂಡ ನೌಕರರಿಗೆ ಶ್ರಮವೀರ ಪ್ರಶಸ್ತಿ ಅನ್ನು ಮಂಗಳವಾರ ಪ್ರದಾನ ಮಾಡಲಾಯಿತು.

ಕಳೆದ ವರ್ಷ ವಾರದಲ್ಲಿ 2 ದಿನ ಹಮ್ಮಿಕೊಂಡಿದ್ದ ಶ್ರಮದಾನದಡಿ ಸ್ವಚ್ಛತಾ ಕಾರ್ಯದಲ್ಲಿ ಕ್ರಿಯಾಶೀಲರಾಗಿದ್ದ ನೌಕರರಿಗೆ 5 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಲಾಗಿದೆ.

ಸಹಾಯಕ ವಿಭಾಗೀಯ ಇಂಜಿನಿಯರ್ ಎಚ್.ಟಿ. ಪ್ರಕಾಶ, ಆರೋಗ್ಯ ನಿರೀಕ್ಷಕರಾದ ಕೃಷ್ಣಕುಮಾರ ಸಿಂಗ್, ಪಿ. ರಮೇಶ, ವರಿಷ್ಠ ಸೆಕ್ಷನ್ ಇಂಜಿನಿಯರ್​ರಾದ ಎಂ. ಶ್ರೀರಂಗಸ್ವಾಮಿ, ಅಭಿಕ್ ಸೇನಗುಪ್ತಾ ಅವರಿಗೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಅವರು ಶ್ರಮದಾನ ಪ್ರಶಸ್ತಿ ವಿತರಿಸಿದರು.

ವಲಯದ ಎಜಿಎಂ ಪಿ.ಕೆ. ಮಿಶ್ರಾ, ಹಿರಿಯ ಅಧಿಕಾರಿಗಳಾದ ಪಿ. ರವಿಕುಮಾರ, ವಿಪುಲ್ ಕುಮಾರ, ರಾಮಾನುಜಮ್ ಆರ್.ವಿ.ಎನ್. ಶರ್ಮಾ ಇತರರು ಹಾಜರಿದ್ದರು.

ಪ್ರತಿ ವಾರದ 2 ದಿನಗಳಲ್ಲಿ ಸಂಜೆ 5 ರಿಂದ 6 ಗಂಟೆಯವರೆಗೆ ರೈಲ್ವೆ ನಿಲ್ದಾಣ, ಕಚೇರಿ, ಕಾಲನಿ ಸೇರಿದಂತೆ ವಿವಿಧೆಡೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ರೈಲ್ವೆ ಮ್ಯೂಸಿಯಂ ಆವರಣದಲ್ಲಿಯೂ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net