ನೈಋತ್ಯ ರೈಲ್ವೆ ಆದಾಯದಲ್ಲಿ ಏರಿಕೆ

Published on


ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯವು ಈ ಆಥಿರ್ಕ ವರ್ಷದ ನವೆಂಬರ್​ವರೆಗೆ 4,447.67 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಗೆ 3,400.83 ಕೋಟಿ ರೂ. ಆದಾಯ ಕ್ರೋಢಿಕರಣವಾಗಿತ್ತು. ಈ ಬಾರಿಯ ಆದಾಯ ಶೇ. 30.78ರಷ್ಟು ಹೆಚ್ಚಾಗಿದೆ.
ಈ ನವೆಂಬರ್​ವರೆಗೆ ಪ್ರಯಾಣಿಕರ ಸಂಚಾರದಿಂದ 1,813.58 ಕೋಟಿ ರೂ. ಆದಾಯ ಗಳಿಕೆಯಾಗಿದ್ದು, ಕಳೆದ ವರ್ಷ 927.31 ಆದಾಯವಾಗಿತ್ತು. ಕಳೆದ ಬಾರಿಗಿಂತ ಶೇ. 95.57ರಷ್ಟು ಹೆಚ್ಚಿನ ಆದಾಯ ಪ್ರಯಾಣಿಕರ ಸಂಚಾರದಿಂದ ಆಗಿದೆ.
ಟಿಕೆಟ್​ ಪರಿಶೀಲನೆಯಿಂದ ಕಳೆದ ಬಾರಿ 15.72 ಕೋಟಿ ರೂ. ದಂಡ ವಸೂಲಿಯಾಗಿತ್ತು. ಈ ಬಾರಿ 37.74 ಕೋಟಿ ರೂ. ಸಂಗ್ರಹಣೆಯಾಗಿದ್ದು, ಇದರಲ್ಲಿಯೂ ಶೇ. 104.08ರಷ್ಟು ಹೆಚ್ಚಳವಾಗಿದೆ.
ಸರಕು ಸಾಗಣೆಯಿಂದ ಬರುವ ಆದಾಯ ಶೇ. 16.32ರಷ್ಟು ಹೆಚ್ಚಳವಾಗಿದೆ. ಸರಕು ಸಾಗಣೆಯಿಂದ ಕಳೆದ ವರ್ಷ 80.20 ಕೋಟಿ ರೂ. ಆದಾಯ ಸಂಗ್ರಹಣೆಯಾಗಿದ್ದರೆ, ಈ ಬಾರಿ 93.29 ಕೋಟಿ ರೂ. ಆದಾಯ ಸಂಗ್ರಹಗೊಂಡಿದೆ.
ರೈಲ್ವೆ ಸಿಬ್ಬಂದಿಯ ಕಾರ್ಯಕ್ಷಮತೆಯಿಂದಾಗಿ ನೈಋತ್ಯ ವಲಯ ಉತ್ತಮ ಆದಾಯ ಗಳಿಸಿದೆ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕುಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net