

ಚಿತ್ರದುರ್ಗ: ಅನಧಿಕೃತ ಗೈರು ಹಾಜರಿ ಹಾಗೂ ಕರ್ತವ್ಯ ನಿರ್ಲಕ್ಷ್ಯಆರೋಪದಡಿ ಚಳ್ಳಕೆರೆ ತಾಲೂಕು ನೇರಲಗುಂಟೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಹ ನುಮಂತಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ. ಹನುಮಂತಕುಮಾರ್ ಕರ್ತವ್ಯಕ್ಕೆ 2024ರ ಸೆಪ್ಟೆಂಬರ್ 30ರಿಂದ ಅನಧಿಕೃತವಾಗಿ ಗೈರು ಹಾಜರಾಗಿದ್ದರು. ಸಾರ್ವಜನಿಕರು ಮತ್ತು ಜನಪ್ರತಿನಿಧಿ ಗಳ ದೂರವಾಣಿ ಕರೆ ಸ್ವೀಕರಿಸದೇ ಇರುವುದರಿಂದ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅಡಚಣೆ ಉಂಟಾಗಿತ್ತು. ಇವರನ್ನು ಬದಲಾವಣೆ ಮಾಡಿ ಅದೇ ಗ್ರಾಪಂ ಗ್ರೇಡ್-1 ಕಾರ‌್ಯದರ್ಶಿ ಕೆ.ಎಸ್.ಜಯಣ್ಣ ಅವರಿಗೆ ಪ್ರಭಾರ ವ್ಯವಸ್ಥೆ ಮಾಡಿಕೊಡಲು ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಕೋರಿಕೆ ಸಲ್ಲಿಸಿದ್ದರು.
ಗ್ರಾಪಂ ಹಾಜರಾತಿ ಪರಿಶೀಲಿಸಿದಾಗ ಹನುಮಂತಕುಮಾರ್ ೂರ್ವಾನುಮತಿ ಪಡೆಯದೇ ಗೈರು ಹಾಜರಾಗಿದ್ದಾರೆ. ಈ ಹಿಂದೆಯೂ ಅವರು ಅನಧಿಕೃತವಾಗಿ ಗೈರು ಹಾಜರಾಗಿದ್ದು,ಈ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಆದ್ದರಿಂದ ಪಿಡಿಒ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತಾ ಪಂ ಇಒ ಜಿಪಂಕ್ಕೆ ವರದಿ ಸಲ್ಲಿಸಿದ್ದರು. ಈ ಹಿನ್ನಲೆ ಹನುಮಂತಕುಮಾರ್‌ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸಿಇಒ ತಿಳಿಸಿ ದ್ದಾರೆ.
-----