ನೇರಲಕೆರೆ ಶಾಲೆಗೆ ಸಮಗ್ರ ಪ್ರಶಸ್ತಿ

TKE sport
ದೊಡ್ಡಕುರುಬರಹಳ್ಳಿಯಲ್ಲಿ ನಡೆದ ಬೀರೂರು ಮತ್ತು ಚಿಕ್ಕಮಗಳೂರು ವಲಯದ ತರಳಬಾಳು ಕ್ರೀಡಾಮೇಳದಲ್ಲಿ ಸಮಗ್ರ ಪ್ರಶಸ್ತಿ ಪಡೆದ ನೇರಲಕೆರೆ ಗ್ರಾಮದ ಶ್ರೀ ಅಮತೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸ್ಥಳೀಯ ಸಲಹಾ ಸಮಿತಿ ಪದಾಧಿಕಾರಿಗಳು ಪ್ರಶಸ್ತಿ ವಿತರಿಸಿದರು. ಕೆ.ಟಿ.ಹಾಲೇಶ್, ಟಿ.ಮಲ್ಲಿಕಾರ್ಜುನಪ್ಪ, ಷಡಾಕ್ಷರಪ್ಪ, ಎನ್.ಟಿ.ಬಸವರಾಜಪ್ಪ, ಟಿ.ಪುಟ್ಟಪ್ಪ ಇತರರಿದ್ದರು.
Published on

ತರೀಕೆರೆ: ಚಿಕ್ಕಮಗಳೂರು ಸಮೀಪದ ದೊಡ್ಡಕುರುಬರಹಳ್ಳಿಯಲ್ಲಿ ಗುರುವಾರ ನಡೆದ ಬೀರೂರು ಮತ್ತು ಚಿಕ್ಕಮಗಳೂರು ವಲಯದ ತರಳಬಾಳು ಕ್ರೀಡಾಮೇಳದಲ್ಲಿ ನೇರಲಕೆರೆ ಗ್ರಾಮದ ಶ್ರೀ ಅಮತೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಒಟ್ಟು 13 ಪ್ರೌಢಶಾಲೆಗಳು ಭಾಗವಹಿಸಿದ್ದವು. ಶ್ರೀ ಅಮತೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಖೋ, ಖೋ, ಉದ್ದ ಜಿಗಿತ ಸೇರಿ ವಿವಿಧ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡರು. ಮುಖ್ಯಶಿಕ್ಷಕ ಕೆ.ಟಿ.ಹಾಲೇಶ್ ಪ್ರಶಸ್ತಿ ವಿತರಿಸಿ ಮಾತನಾಡಿ, ಮಕ್ಕಳ ಸಾಧನೆ ಡಿ.28ರಿಂದ ಸಿರಿಗೆರೆಯಲ್ಲಿ ನಡೆಯುವ ಕೇಂದ್ರ ಹಂತದ ಸ್ಪರ್ಧೆಯಲ್ಲೂ ಮುಂದುವರಿಯಲಿ ಎಂದು ಆಶಿಸಿದರು.

ಸ್ಥಳೀಯ ಸಲಹಾ ಸಮತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನಪ್ಪ, ಉಪಾಧ್ಯಕ್ಷ ಷಡಾಕ್ಷರಪ್ಪ, ಸದಸ್ಯರಾದ ಎನ್.ಟಿ.ಬಸವರಾಜಪ್ಪ, ಟಿ.ಪುಟ್ಟಪ್ಪ, ಬೊಮ್ಮೇನಹಳ್ಳಿ ನಿಂಗಪ್ಪ, ಎನ್.ಎಂ.ಬಸವರಾಜಪ್ಪ, ಮಲ್ಲೇಶಪ್ಪ, ನಾಗರಾಜ್, ಮಹೇಶ್ವರಪ್ಪ, ಶಾಲಾ ಸಿಬ್ಬಂದಿ ಖಿಜರ್ ಖಾನ್, ರಮಾಕಾಂತ್, ಸತೀಶ್ ನಂದಿಹಳ್ಳಿ, ಮಂಜುಳಾ ಮಲ್ಲಿಗವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net