ನೇರ ಸಂದರ್ಶನ 8ರಂದು

job-fair-feaured.png
Published on

ಕಲಬುರಗಿ: ನಗರದ ಎಂಎಸ್‌ಕೆ ಮಿಲ್ ರಸ್ತೆಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸೆ.೮ರಂದು ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೨ರವರೆಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ. ಮುತ್ತೂಟ್ ಮೈಕ್ರೊಫಿನ್‌ನಲ್ಲಿ ರಿಲೇಶನ್‌ಶಿಫ್ ಆಫೀಸರ್ ಹುದ್ದೆಗೆ ಪಿಯುಸಿ/ ಯಾವುದೇ ಪದವಿ ಪಾಸಾಗಿರಬೇಕು. ಶ್ರೀ ಬಸವ ಅಗ್ರಿಟೆಕ್ (ಜಾನ್‌ಧೇರೆ ಟ್ರಾಕ್ರ‍್ಸ್)ನಲ್ಲಿ ಸೆಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಪಿಯುಸಿ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೩೫ ವರ್ಷದೊಳಗಿರಬೇಕು. ಕನೆಕ್ಟ್ ಬಿಜಿನೆಸ್ ಸಲ್ಯೂಷನ್ಸ್ದಲ್ಲಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಹುದ್ದೆಗೆ ಪಿಯುಸಿ /ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೩೦ ವರ್ಷದೊಳಗಿರಬೇಕು. ಆಸಕ್ತ ಅಭ್ಯರ್ಥಿಗಳು ಅಂಕಪಟ್ಟಿಗಳ ಜೆರಾಕ್ಸ್, ರೆಸ್ಯೂಮ್, ಭಾವಚಿತ್ರ ಹಾಗೂ ಆಧಾರ್ ಕಾರ್ಡ್ನೊಂದಿಗೆ ನಿಗದಿತ ದಿನದಂದು ನಡೆಯುವ ನೇರ ಸಂದರ್ಶನದಲ್ಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ.೦೮೪೭೨-೨೭೪೮೪೬, ಮೊ. ೯೬೨೦೦೯೫೨೭೦ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net