ನೇರ ಪ್ರಸಾರ ವೀಕ್ಷಿಸಲು ಸಿದ್ಧತೆ ಮಾಡಿಕೊಳ್ಳಿ

01
Published on

ಸುರಪುರ : ಗೃಹಲಕ್ಷ್ಮೀ ಯೋಜನೆ ೨೭ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವ ಕಾರ್ಯಕ್ರಮದ ನೇರ ಪ್ರಸಾರವನ್ನು ಫಲಾನುಭವಿಗಳು ವೀಕ್ಷಿಸಲು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶರಣಬಸವರಾಜ ಹೇಳಿದರು.

ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಸಂಜೆ ಪೂರ್ವಭಾವಿ ಸಭೆ ನಡೆಸಿದ ಅವರು, ಪ್ರತಿ ಗ್ರಾಪಂನಲ್ಲಿ ೨೦೦ ಅರ್ಹ ಫಲಾನುಭವಿಗಳು ನೇರ ಪ್ರಸಾರವನ್ನು ಯಾವುದೇ ಲೋಪವಿಲ್ಲದೆ ವೀಕ್ಷಿಸುವಂತೆ ವ್ಯವಸ್ಥೆ ಮಾಡಬೇಕು. ಯೋಜನೆಯಡಿ ನೋಂದಣಿ ಮಾಡಿದ ಯಜಮಾನಿಗೆ ಮಾಹಿತಿ ತಲುಪಿಸಬೇಕು. ಮುಖ್ಯಮಂತ್ರಿಗಳು ಫಲಾನುಭವಿಯೊಂದಿಗೆ ಯೋಜನೆ ಕುರಿತು ಮಾತನಾಡುವ ಸಂಭವ ಇದೆ. ಹೀಗಾಗಿ ತಾಪಂ ಮತ್ತು ಗ್ರಾಪಂ ಅಧಿಕಾರಿಗಳು ಲೋಪವಾಗದಂತೆ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ತಹಸೀಲ್ದಾರ್ ಕೆ.ವಿಜಯಕುಮಾರ, ತಾಪಂ ಇಒ ಬಸವರಾಜ ಸಜ್ಜನ್, ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರ ರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net