ನೇರ ಪ್ರಸಾರ ಮೂಲಕ ಹೃದಯ ಶಸ್ತ್ರಚಿಕಿತ್ಸೆ

TMK_PAGE_3 Lead
ತುಮಕೂರಿನ ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಹೃದಯ ಶಸ್ತ್ರಚಿಕಿತ್ಸೆ ನೇರ ಪ್ರಸಾರ ‘ಕೊರೊ ಲೈವ್ 2023’ ಕಾರ್ಯಾಗಾರಕ್ಕೆ ಕನ್ಯಕಾಪರಮೇಶ್ವರ್ ಚಾಲನೆ ನೀಡಿದರು. ತಮೀಮ್ ಅಹ್ಮದ್, ಡಾ.ಲಿಂಗೇಗೌಡ, ಡಾ.ಸಂಜಯ್ ಚಟರ್ಜಿ, ಡಾ.ವಿನೋದ್ ಕುಮಾರ್ ಮತ್ತಿತರರು ಇದ್ದರು.
Published on

ತುಮಕೂರು: ನಗರದ ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಹೃದಯ ಶಸ್ತ್ರಚಿಕಿತ್ಸೆಯನ್ನು ನೇರ ಪ್ರಸಾರ ಮೂಲಕ ಮಾಡಿ ಅದರ ಸಂವಾದ ಮತ್ತು ಮಾಹಿತಿ ವಿನಿಮಯವನ್ನು ಹೃದಯ ಶಸ್ತ್ರಚಿಕಿತ್ಸಕ ಡಾ.ತಮೀಮ್ ಅಹ್ಮದ್ ನಡೆಸಿಕೊಟ್ಟರು.
ಮಾ.24ರಿಂದ 26ರವರೆಗೆ ನಡೆಯುವ ಕೊರೊ ಲೈವ್ 2023 ಕಾರ್ಯಾಗಾರದ ಮೊದಲ ದಿನದ ಉದ್ಘಾಟನಾ ಸಮಾರಂಭದ ನಂತರ ಡಾ.ತಮೀಮ್ ಅಹಮದ್ ಅವರು ನೇರ ಪ್ರಸಾರದ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಮಾಹಿತಿ ಹಂಚಿಕೊಂಡರು. ನೇಪಾಳ, ಸಿಕ್ಕಿಂ, ಕೇರಳ, ಆಂಧ್ರ, ತಮಿಳುನಾಡು, ಮುಂಬೈ, ನವದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿ ದೇಶದ 15ಕ್ಕೂ ಹೆಚ್ಚು ರಾಜ್ಯಗಳಿಂದ ಆಗುಮಿಸಿದ ತಜ್ಞ ವೈದ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕರೋನರಿ ಆರ್ಥಿರಿ ಬೈಪಾಸ್ ಸರ್ಜರಿ ಕುರಿತು ಮುಕ್ತ ಚರ್ಚೆ ಮಾಡುತ್ತಲೇ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತಂತ್ರಜ್ಞಾನ ಅಳವಡಿಕೆ ಹೇಗೆ ಮಾಡಿಕೊಳ್ಳಬೇಕು ಮತ್ತು ಕಡಿಮೆ ಸಮಯದಲ್ಲಿ ರೋಗಿಗೆ ಯಾವುದೇ ತೊಂದರೆ ಆಗದೆ ಸೂಕ್ಷ್ಮವಾಗಿ ಶಸ್ತ್ರ ಚಿಕಿತ್ಸೆ ಮಾಡುವುದರ ಬಗ್ಗೆ ನೇರ ಶಸ್ತ್ರಚಿಕಿತ್ಸೆ ಮಾಡುತ್ತಾ ಬಹಳಷ್ಟು ಮಾಹಿತಿ ತಿಳಿಸಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಕನ್ಯಕಾ ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆಯನ್ನು ನೇರ ಪ್ರಸಾರದ ಮೂಲಕ ನಡೆಸಿ ಅದರ ಸಂವಾದ ಮತ್ತು ಮಾಹಿತಿ ವಿನಿಮಯ ಕಾರ್ಯಾಗಾರ ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವುದು ಮಾದರಿಯಾಗಿದೆ ಎಂದರು.
ಹೃದಯ ತಜ್ಞರಾದ ಡಾ.ಸಂಜಯ್ ಚಟರ್ಜಿ, ಡಾ.ವಿನೋದ್ ಕುಮಾರ್, ಸಾಹೇ ವಿವಿ ಉಪಕುಲಪತಿ ಡಾ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ.ಎಂ.ಝಡ್. ಕುರಿಯನ್, ಪ್ರಾಚಾರ್ಯ ಡಾ.ಎನ್.ಜಿ.ಪ್ರಭಾಕರ್, ದಂತ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಪ್ರವೀಣ್ ಕುಡ್ವ, ಎಸ್‌ಎಸ್‌ಐಟಿ ಪ್ರಾಚಾರ್ಯ ಡಾ.ಎಂ. ಎಸ್. ರವಿಪ್ರಕಾಶ್, ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net