ನೇರ ಪಾವತಿಯಡಿ ಪೌರ ಕಾರ್ಮಿಕರ ತನ್ನಿ

oppo_2
oppo_2
Published on

ಕಲಬುರಗಿ: ಮಹಾನಗರ ಪಾಲಿಕೆಯ ಸುಮಾರು ೧೦೫೦ ಪೌರಕಾರ್ಮಿಕರು, ೫೯೯ ಲೋಡರ್, ಡ್ರೆÊವರ್, ಕ್ಲೀನರ್ ಮತ್ತು ಗಾರ್ಡರ‍್ಸ್ ಸೇರಿ ೧೬೪೯ ಜನರನ್ನು ನೇರ ಪಾವತಿ ಅಡಿ ಏಕಕಾಲಕ್ಕೆ ಆದೇಶ ನೀಡಿ ಗುತ್ತಿಗೆದಾರರ ಶೋಷಣೆಯಿಂದ ಮುಕ್ತಿ ನೀಡಬೇಕು ಎಂದು ಪಾಲಿಕೆ ಪೌರಕಾರ್ಮಿಕ ಸಂಘದ ಅಧ್ಯಕ್ಷ ಸುನೀಲ ಮಾನ್ಪಡೆ ಆಗ್ರಹಿಸಿದರು.
೨೦೧೭-೧೮ರ ನೇಮಕ ಆದೇಶದಂತೆ ೨೦೨೧ರಲ್ಲಿ ಜಿಲ್ಲಾಧಿಕಾರಿ ಹೊರಡಿಸಿರುವ ಪೌರ ಕಾರ್ಮಿಕರ ನೇಮಕ ಮತ್ತು ನೇರ ಪಾವತಿ ತಾತ್ಕಾಲಿಕ ಆಯ್ಕೆ ಪಟ್ಟಿ ನಿಯಮದ ವಿರುದ್ಧವಿದೆ. ಭ್ರಷ್ಟಾಚಾರ ನಡೆಸಿ ಸೇವಾ ಹಿರಿತನ ಪರಿಗಣಿಸದೆ ಪಟ್ಟಿ ಪ್ರಕಟಿಸಲಾಗಿದೆ. ಕೂಡಲೇ ಇದನ್ನು ರದ್ದುಪಡಿಸಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
೨೦-೨೫ ವರ್ಷದಿಂದ ಸೇವೆ ಸಲ್ಲಿಸಿದ ಬಡ ಪೌರಕಾರ್ಮಿಕರ ಹಿರಿತನ ಪರಿಗಣಿಸಿಲ್ಲ. ತಾತ್ಕಾಲಿಕ ಪಟ್ಟಿ ರದ್ದುಪಡಿಸಿ ಅಕ್ರಮದ ವಿಚಾರಣೆ ನಡೆಸಿ ಅಂದಿನ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಸೇವಾ ಹಿರಿತನ, ಮೀಸಲು, ಪೌರಕಾರ್ಮಿಕರಲ್ಲದವರ ನೇಮಕ ಮಾಡಿದ್ದು ಸ್ಪಷ್ಟವಾಗಿದ್ದು, ಕ್ರಮಕ್ಕೆ ಸೂಚಿಸಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಿಕೆ ಅಧಿಕಾರಿಗಳು ಸೇವಾ ಹಿರಿತನದಲ್ಲಿದ್ದ ಪೌರ ಕಾರ್ಮಿಕರನ್ನು ವಿನಾಕಾರಣ ೨೦೧೬ರಿಂದ ಹೊರದಬ್ಬಿ ಲೋಡರ್‌ಗಳನ್ನಾಗಿ ಮಾಡಿದ್ದಾರೆ. ನಂತರ ಆದೇಶ ಹೊರಡಿಸಿದಾಗ ತಮಗೆ ಬೇಕಾದವರನ್ನು ಪಟ್ಟಿಯಲ್ಲಿ ಸೇರಿಸಿದ್ದಾರೆ. ತಾತ್ಕಾಲಿಕ ಪಟ್ಟಿಯಲ್ಲಿ ೧೭ ತಪ್ಪುಗಳಿದ್ದು, ಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರಕರಣ ವಿಚಾರಣೆ ಹಂತದಲ್ಲಿದೆ. ಕೂಡಲೇ ಪ್ರಾದೇಶಿಕ ಆಯುಕ್ತರ ವರದಿ ಜಾರಿಗೊಳಿಸಿ ಪೌರಕಾರ್ಮಿಕರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸೇವಾ ಹಿರಿತನ ಪರಿಗಣಿಸಿ ಕಾಯಂ ಮಾಡಬೇಕು. ಕಾರ್ಮಿಕರಿಗೆ ಅಪಾರ್ಟ್ಮೆಂಟ್ ಬದಲು ೩೦*೪೦ ನಿವೇಶನ ನೀಡಬೇಕು. ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ ೪೦ ಮಹಿಳೆಯರನ್ನು ಲೋಡರ್ ಕೆಲಸದಿಂದ ಬಿಡಿಸಿ ಪೌರಕಾರ್ಮಿಕರ ಕೆಲಸ ಕೊಡಬೇಕು. ಬಾಕಿ ಇರುವ ಪಿಎಫ್ ನೀಡಬೇಕು. ನೇಮಕಗೊಂಡ ಹುz್ದÉÃಯಲ್ಲೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಚಂದು ಜಾಧವ್, ಶಾಂತಪ್ಪ ಪಾಟೀಲ್, ಸೋಮಶೇಖರ ನಿಂಗ, ಅನೀಲ ಮಂಗಾ, ಕಮಲಾಬಾಯಿ, ಸಂಗಮೇಶ ಕಲಬುರಗಿ, ರಾಘವೇಂದ್ರ ಔರಾದಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net