

ಕಲಬುರಗಿ: ರಾಜ್ಯದ ವಿವಿಧ ನೇಮಕಾತಿ ಪ್ರಾಧಿಕಾರಗಳಾದ ಕೆಪಿಎಸ್‌ಸಿ, ಕೆಇಎ, ಕೆಎಸ್‌ಪಿ ಸೇರಿ ಹಲವು ನೇಮಕ ಪ್ರಾಧಿಕಾರಿಗಳು ರಾಜ್ಯದ ಹುದ್ದೆಗಳ ಭರ್ತಿಯಲ್ಲಿ ೩೭೧(ಜೆ) ಸಂಬAಧಿಸಿದ ಸರ್ಕಾರದ ಸುತ್ತೋಲೆಗಳಂತೆ ನೇಮಕಾತಿ ಮಾಡದೆ ಮನಸೋ ಇಚ್ಛೆಯಂತೆ ಭಿನ್ನ ನಿಯಮಗಳಂತೆ ನೇಮಕಾತಿ ಮಾಡಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಆರೋಪಿಸಿದರು.
ಕಲ್ಯಾಣ ಕರ್ನಾಟಕ ಜಿಲ್ಲೆಗಳು, ಕಕ ಹೊರತುಪಡಿಸಿದ ಜಿಲ್ಲೆಗಳಲ್ಲಿ ಮೀಸಲು ನೀಡುವಲ್ಲಿ, ನೇಮಕಾತಿ ಪ್ರಕ್ರಿಯೆಯಲ್ಲಿ ನಿರಂತರ ಗೊಂದಲ ಮೂಡಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೆಪಿಎಸ್‌ಎಸ್ಸಿಯೂ ಕಕ ಹಾಗೂ ಕಕ ಹೊರತುಪಡಿಸಿ ಹುದ್ದೆಗೆ ಪ್ರತ್ಯೇಕ ನೇಮಕ ಅಧಿಸೂಚನೆ ಹೊರಡಿಸಿ ನೇಮಕ ಮಾಡಿಕೊಳ್ಳುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತ್ಯೇಕ ಹೊರಡಿಸದೇ ಒಂದೇ ನೇಮಕಾತಿ ಅಧಿಸೂಚನೆ ಹೊರಡಿಸ, ನೇಮಕ ಮಾಡುತ್ತದೆ. ಹೀಗೆ ವಿಭಿನ್ನ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ನಮ್ಮ ಭಾಗದ ಅಭ್ಯರ್ಥಿಗಳಿಗೆ ಅನ್ಯಾವಾಗುತ್ತಿದೆ ಎಂದು ಕಿಡಿ ಕಾರಿದರು.
೩೭೧(ಜೆ) ಪ್ರಕಾರ ೨೦೨೩ ಫೆ.೧ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಸುತ್ತೋಲೆ ಆದೇಶದಂತೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಆದರೆ ಯಾರೊಬ್ಬರೂ ಈ ಪ್ರಕ್ರಿಯೆ ನಡೆಸದೇ ಭಿನ್ನ ಬಿನ್ನ ಮಾಡುತ್ತಿದ್ದಾರೆ. ಇದರಿಂದ ಅಭ್ಯರ್ಥಿಗಳಿಗೆ ಗೊಂದಲವಾಗಿ ಪದೇ ಪದೆ ಕೋರ್ಟ್ ಮೊರೆ ಹೋಗುವ ಸ್ಥಿತಿ ಸೃಷ್ಟಿಯಾಗಿದೆ ಎಂದು ಹೇಳಿದರು.
ಕೆಪಿಎಸ್‌ಸಿ ನಡೆಸಿರುವ ಸಿಟಿಐ, ಪಿಡಿಒ, ಎಇ, ಜೆಇ, ಆರ್‌ಐಒ ಹಾಗೂ ಇತರೆ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ಹಾಗೂ ಕಕ ಹೊರತುಪಡಿಸಿದ ಎಂದು ಪ್ರತ್ಯೇಕವಾಗಿ ನೇಮಕಾತಿ ಮಾಡಿದೆ, ಮಾಡುತ್ತಿದೆ. ಗೃಹ ಇಲಾಖೆಯೂ ಪ್ರತ್ಯೇಕ ನೇಮಕ ಮಾಡಿಕೊಳ್ಳುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ಒಂದೇ ಅಧಿಸೂಚನೆಯಲ್ಲಿ ಒಂದೇ ಪರೀಕ್ಷೆ ನಡೆಸಿ, ನೇಮಕಾತಿ ಮಾಡಿ ಪ್ರತ್ಯೇಕ ಆಯ್ಕೆಪಟ್ಟಿ ಹೊರಡಿಸುತ್ತಿದೆ ಎಂದು ಆರೋಪಿಸಿದರು.