ನೇತ್ರದಾನ ಜಾಗೃತಿ,ಮಾಹಿತಿಗೆ ಕ್ರಮ

CTD 29 DR MEGANA--02
Published on

ನೇತ್ರದಾನ ಜಾಗೃತಿ,ಮಾಹಿತಿಗೆ ಕ್ರಮ
ಚಿತ್ರದುರ್ಗ: ನೇತ್ರದಾನ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ಆರ್.ಮೇಘನಾ ಸಲಹೆ ನೀಡಿದರು.
ಆರೋಗ್ಯಇಲಾಖೆಯಿಂದ ಚಿತ್ರದುರ್ಗ ತಾಲೂಕು ಗೋನೂರು ನಿರಾಶ್ರೀತರ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನೇಕರಿಗೆ ನೇತ್ರದಾನದೆಡೆ ಆಸಕ್ತಿ ಇದ್ದರೂ ಅವರಲ್ಲಿ ಈ ಕುರಿತು ಮಾಹಿತಿಯ ಕೊರತೆ ಇರುತ್ತದೆ. ಈ ಕುರಿತಂತೆ ಜಾಗೃತಿ ಮೂಡಿ ಸುವುದರೊಂದಿಗೆ ನೇತ್ರದಾನದ ಮಹತ್ವವನ್ನು ಸಾರಲು ಮಾಹಿತಿ ಶಿಕ್ಷಣ ಸಂವಹನ ಕಾರ‌್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲಾ ಸ್ಪತ್ರೆ ನೇತ್ರಾಧಿಕಾರಿ ಆನ್‌ಲೈನ್ ಮೂಲಕ ನೇತ್ರದಾನಕ್ಕೆ ಹೆಸರು ನೋಂದಾಯಿಸಲಿದ್ದಾರೆ ಎಂದರು.
ಜಿಲ್ಲಾಸ್ಪತ್ರೆ ಜಿಲ್ಲಾ ನೇತ್ರ ತಜ್ಞ ಡಾ.ಪ್ರದೀಪ್ ಮಾತನಾಡಿ,ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ನೀಡುತ್ತದೆ ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್,ಜಿಲ್ಲಾಸ್ಪತ್ರೆ ನೇತ್ರಾಧಿಕಾರಿ ಕೆ.ರಾಮು,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್,ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್,ನಿರಾಶ್ರೀತ ಕೇಂದ್ರದ ವ್ಯವಸ್ಥಾಪಕ ಮಹದೇವಯ್ಯ ಇದ್ದರು.
(ಸಿಟಿಡಿ 29 ಡಾ.ಮೇಘನಾ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net