

ಕೊಪ್ಪಳ: ಎಂಎಂ ಜೋಶಿ ಆಸ್ಪತ್ರೆಯಿಂದ ಬುಧವಾರ ಹಮ್ಮಿಕೊಂಡಿದ್ದ ನೇತ್ರದಾನ ಜಾಗೃತಿ ಜಾಥಾಕ್ಕೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ನಗರದ ಗವಿಮಠ ಆವರಣದಿಂದ ಆರಂಭವಾದ ಜಾಥಾ ಬಸವೇಶ್ವರ ವೃತ್ತ ಮಾರ್ಗವಾಗಿ ಹೊಸಪೇಟೆ ರಸ್ತೆಯ ಎಂ.ಎಂ.ಜೋಶಿ ಆಸ್ಪತ್ರೆವರೆಗೆ ಸಾಗಿತು. ರೆಡ್‌ಕ್ರಾಸ್, ಇನ್ನರ್ ವ್ಹೀಲ್ ಕ್ಲಬ್, ಗವಿಸಿದ್ದೇಶ್ವರ ಆಯುರ್ವೇದ ಆಸ್ಪತ್ರೆ ಹಾಗೂ ಇತರ ಸಂಘ, ಸಂಸ್ಥೆ ಪ್ರತಿನಿಧಿಗಳು ಜಾಥಾದಲ್ಲಿ ಪಾಲ್ಗೊಂಡರು. ದಾರಿಯುದ್ದಕ್ಕೂ ನೇತ್ರದಾನ ಮಹತ್ವ, ಮಾಡುವ ವಿಧಾನ, ಆಗುವ ಪ್ರಯೋಜನಗಳ ಕುರಿತು ಘೋಷಣೆ ಕೂಗಿದರು.
ನೇತ್ರದಾನ ಮಾಡುವ ಸಂಬಂಧ ಮಾಹಿತಿಯುಳ್ಳ ಕ್ಯೂಆರ್ ಕೋಡ್ ಬಿಡುಗಡೆ ಮಾಡಲಾಯಿತು. ಎಸ್ಪಿ ಯಶೋದಾ ವಂಟಗೋಡಿ, ಪ್ರಮುಖರಾದ ಶಾಂತಣ್ಣ ಮುದಗಲ್, ಡಾ.ಶ್ರೀನಿವಾಸ ಎಂ.ಜೋಶಿ, ಡಾ.ಅನಿಕೇತ ಶಾಸ್ತ್ರಿ, ಡಾ.ವಿಕಾಸ್ ಐಲಿ, ಡಾ.ಶ್ರೀನಿವಾಸ ಹ್ಯಾಟಿ, ತಂತ್ರಜ್ಞೆ ಮಂಜುಳಾ ಕರಗುದರಿ, ಪ್ರದೀಪ್ ಇತರರಿದ್ದರು.