ನೇತ್ರದಾನ ಅಂಧರಿಗೆ ದಾರಿ ದೀಪವಾಗಲಿದೆ

580faf1b-1934-4a79-9948-7ea3c249431d--004
Published on

ಚಿತ್ರದುರ್ಗ: ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್,38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಮ ಹಾ ವಿದ್ಯಾಲಯದಲ್ಲಿ ಶನಿವಾರ ನೇತ್ರದಾನ ಜಾಗೃತಿಯನ್ನು ಏರ್ಪಡಿಸಲಾಗಿತ್ತು. ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಐ ಬ್ಯಾಂಕ್ ಸ್ಥಾಪ ನಾಧ್ಯಕ್ಷೆ ಗಾಯತ್ರಿಶಿವರಾಮ್,ನೇತ್ರದಾನ ಬಹಳ ಮುಖ್ಯದಾನವಾಗಿದೆ.
ನಮ್ಮ ಸಾವಿನ ನಂತರವೂ ನಮ್ಮ ಕಣ್ಣುಗಳು ಜೀವಂತವಾಗಿರುತ್ತವೆ. ಕಣ್ಣುಗಳ ದಾನ ಇಬ್ಬರು ಅಂಧರಿಗೆ ದೃಷ್ಟಿ ದೊರಕಲು ನೆರವಾಗು ತ್ತದೆ,ಅವರ ಬದುಕಿಗೆ ದಾರಿ ದೀಪವಾಗಲಿದೆ ಎಂದರು. ರೋಟರಿ ಕ್ಲಬ್ ಫೋರ್ಟ್ ಅಧ್ಯಕ್ಷ ಎಂ.ಗಿರೀಶ್ ಮಾತನಾಡಿ,ಅತ್ಯಂತ ಪ್ರಮುಖ ಅಂಗ ಕಣ್ಣು.ನೇತ್ರದಾನದ ಮಹತ್ವದೆಡೆ ಜಾಗೃತಿ ಮೂಡಿಸುವ ಹೊಣೆ ಸಮಾಜದ ಎಲ್ಲರ ಮೇಲಿದೆ ಎಂದರು. ಐ ಬ್ಯಾಂಕ್ ಅಧ್ಯಕ್ಷ ಪಿ.ಬಿ.ಶಿವರಾಮ್,ಕಾರ‌್ಯದರ್ಶಿ ಟಿ.ವಿ.ಸ್ವಾಮಿ,ಸಂಚಾಲಕ ಎಸ್.ವೀರೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net