

ಕಲಬುರಗಿ: ಪಂಚೇಂದ್ರಿಯಗಳಲ್ಲಿ ಪ್ರಮುಖವಾಗಿರುವ ಕಣ್ಣಿನಿಂದಲೇ ಮನುಷ್ಯ ಶೇ.೮೦ ಜ್ಞಾನ ಪಡೆಯುತ್ತಿದ್ದು, ಅದರ ಆರೋಗ್ಯ ಕಾಪಾಡಲು ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆಯೂ ನಿರಂತರ ಜಾಗೃತಿ, ತಪಾಸಣೆ, ಚಿಕಿತ್ಸೆ, ಶಸ್ತç ಚಿಕಿತ್ಸೆ ನಡೆಸುತ್ತಿದ್ದು, ಅ.೧೦ರಂದು ವಿಶ್ವ ದೃಷ್ಟಿ ದಿನ ಆಚರಣೆ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ವಿವಿಧೆಡೆ ಸರಣಿ ನೇತ್ರ ಉಚಿತ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ.ರಾಜಶ್ರೀ ವಿ.ರಡ್ಡಿ ಹೇಳಿದರು.
ಪ್ರಸಕ್ತ ವರ್ಷ ಸೇಡಂ ತಾಲೂಕಿನ ಹಳ್ಳಿಗಳಲ್ಲಿ ಅ.೧ರಿಂದ ೩೧ರವರೆಗೆ ಸರಣಿ ನೇತ್ರ ಉಚಿತ ತಪಾಸಣೆ ಶಿಬಿರಗಳು ಆರಂಭವಾಗಲಿದ್ದು, ವಿಶೇಷವಾಗಿ ೧೦ ಶಿಬಿರ ನಡೆಸಲಾಗುತ್ತಿದೆ. ಪ್ರತಿ ಹಳ್ಳಿಯಲ್ಲಿ ಕನಿಷ್ಠ ೧೦ರಿಂದ ೧೫ ಜನರಿಗೆ ಉಚಿತ ನೇತ್ರ ಶಸ್ತç ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಾ.ನೀತಾ ಮಾತನಾಡಿ, ಪ್ರಸ್ತುತ ರೈತಾಪಿ ವರ್ಗದಲ್ಲಿ ಕೀಟನಾಶಕ ಸಿಂಪಡಣೆಯ ದಿನಗಳಿದ್ದು, ಕೀಟನಾಶ ಕಣ್ಣಿಗೆ ತಗುಲಿ ದೃಷ್ಟಿ ದೋಷ ಉಂಟಾಗುತ್ತಿದೆ. ರೈತರು ಎಚ್ಚರಿಕೆಯಿಂದ ಇರಬೇಕು. ಕಣ್ಣಿನಲ್ಲಿ ಕೀಟನಾಶಕ ಬಿದ್ದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇದಕ್ಕೆ ಚಿಕಿತ್ಸೆ ಇದ್ದು, ಯಾವುದೇ ಕಾರಣಕ್ಕೂ ನಿರ್ಲಕ್ಷÈ ವಹಿಸಬಾರದು ಎಂದು ಸಲಹೆ ನೀಡಿದರು.
ಡಾ.ಸಿದ್ದಲಿಂಗ ರಡ್ಡಿ ಮಾತನಾಡಿ, ಸಕ್ಕರೆ ಕಾಯಿಲೆ ಇರುವ ರೋಗಿಯ ಇಡೀ ದೇಹದ ಸ್ಥಿತಿಯನ್ನು ಕಣ್ಣನ್ನು ನೋಡಿ ಹೇಳಬಹುದಾಗಿದೆ. ಸಕ್ಕರೆ ಕಾಯಿಲೆ ಇರುವವರು ಆರು ತಿಂಗಳಿಗೊಮ್ಮೆ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಡಾ.ವಿಶ್ವನಾಥ ರಡ್ಡಿ, ಎಸ್.ಎಸ್.ಹಿರೇಮಠ ಇದ್ದರು.