ನೇತ್ರ ತಪಾಸಣೆ ಶಿಬಿರ ಯಶಸ್ವಿ

14Kagavad2
Published on

ಕಾಗವಾಡ: ತಾಲೂಕಿನ ಕುಸನಾಳ ಗ್ರಾಮದಲ್ಲಿ ಮಿರಜ್‌ನ ಖ್ಯಾತ ನೇತ್ರ ತಜ್ಞ ವೈದ್ಯ ಡಾ.ಶರದ ಭೋಮಾಜ ಮತ್ತು ಡಾ.ಪೂಜಾ ಭೋಮಾಜ ಇವರ ಶಾಂತಿ ಸರೋಜ ನೇತ್ರಾಲಯದ ವತಿಯಿಂದ ನೇತ್ರ ತಪಾಸಣೆ ಉಚಿತ ಶಿಬಿರ ಶುಕ್ರವಾರ ಜರುಗಿತು.

ಗ್ರಾಮದ ಪಾರ್ಶ್ವನಾಥ ಎಜುಕೇಷನ್ ಮೈನಾರಟಿ ಟ್ರಸ್ಟ್‌ನ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಪಾಲಕರು ಮತ್ತು ಗ್ರಾಮಸ್ಥರಿಗೆ ಏರ್ಪಡಿಸಿದ್ದ ನೇತ್ರ ತಪಾಸಣೆ ಉಚಿತ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಹಾಗೂ ವಿದ್ಯಾರ್ಥಿಗಳು ನೇತ್ರ ತಪಾಸಣೆ ಮಾಡಿಸಿಕೊಂಡರು. ಕಣ್ಣಿನ ಸಣ್ಣಪುಟ್ಟ ತೊಂದರೆ ಇದ್ದವರಿಗೆ ಅಲ್ಲಿಯೇ ಪರೀಕ್ಷಿಸಿ ಸೂಕ್ತ ಮಾರ್ಗದರ್ಶನ ನೀಡಿದರು.

ಪಾರ್ಶ್ವನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲಗೌಡ ಪಾಟೀಲ, ಉಪಾಧ್ಯಕ್ಷ ಶಾಂತಿಸಾಗರ ಪಾಟೀಲ, ಕಾರ್ಯದರ್ಶಿ ಸುಕುಮಾರ ಬಳೋಲ, ಲಗಮಣ್ಣ ಸುರೋಶಿ, ಗಣಪತಿ ಕೋರೆ, ಜಿನ್ನಪ್ಪ ಮಗದುಮ್ಮ, ಈರಗೌಡ ಪಾಟೀಲ, ಆಸ್ಪತ್ರೆಯ ಡಾ.ಕೃಷ್ಣಾ ಶಹಾ, ಸಂಗೀತಾ ಪುದಾಲೆ, ವಿಶಾಲ ಶೇಳಕೆ, ವಿಶಾಲ ಪಾರಶೆಟ್ಟಿ, ರಾಹುಲ, ಶ್ರೀಶೈಲ ಕೋರೆ, ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net