

ಚಿಂಚೋಳಿ: ತಾಲೂಕಿನ ಪತ್ತು ನಾಯಕ ತಾಂಡಾದಲ್ಲಿ ಬಾಲಕಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕಲ್ಪನಾ ಶೇಟ್ಟಿ ಚೌವ್ಹಾಣ್ (17) ನೇಣಿಗೆ ಶರಣಾದವಳು.
ಕಳೆದ ಕೆಲವು ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಬಾಧೆ ತಾಳದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಂದೆ ಶೇಟ್ಟಿ ಚವ್ಹಾಣ ದೂರಿನ ಹಿನ್ನೆಲೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.