ನೇಣು ಬಿಗಿದುಕೊಂಡು ಸಿವಿಲ್ ಇಂಜಿನಿಯರ್ ಆತ್ಮಹತ್ಯೆ

suicide
suicide
Published on

ಮೈಸೂರು: ಕಟ್ಟಡ ನಿರ್ವಾಣ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ನಿಂದಿಸುತ್ತಿದ್ದರಿಂದ ಮನನೊಂದು ಸಿವಿಲ್ ಇಂಜಿನಿಯರ್ ನೇಣು ಬಿಗಿದು ಆತ್ಮಹತ್ಯೆ ವಾಡಿಕೊಂಡಿದ್ದಾರೆ.

ವಿದ್ಯಾರಣ್ಯಪುರಂ ನಿವಾಸಿ, ಸಿವಿಲ್ ಇಂಜಿನಿಯರ್ ಎಂ.ಎ.ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಕೆಲ ಕಟ್ಟಡ ನಿರ್ವಾಣ ಕಾಮಗಾರಿಯನ್ನು ಜಯರಾಮ್ ನೀಡಿದ್ದರು.

ಬೇಗ ಪೂರ್ಣಗೊಳಿಸುವಂತೆ ಸಾರ್ವಜನಿಕವಾಗಿ ನಿಂದಿಸುತ್ತಿದ್ದರು. ಇದರಿಂದ ಬೇಸತ್ತು ಪತಿ ಮನೆಯಲ್ಲಿನ ಕೋಣೆಯಲ್ಲಿ ಆತ್ಮಹತ್ಯೆ ವಾಡಿಕೊಂಡಿದ್ದಾರೆ ಎಂದು ಮತರ ಪತ್ನಿ ಶ್ವೇತಾ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net