ನೇಣು ಬಿಗಿದುಕೊಂಡು ಪಾನಿಪುರಿ ವ್ಯಾಪಾರಿ ಆತ್ಮಹತ್ಯೆ

14 mlv 1
ಶಶಿಕುಮಾರ್
Published on

ಮಳವಳ್ಳಿ: ಪಟ್ಟಣದ ಗೌಡಯ್ಯನ ಬೀದಿ ನಿವಾಸಿ ಮಲ್ಲಣ್ಣ ಎಂಬುವರ ಪುತ್ರ ಶಶಿಕುಮಾರ್(38) ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಟ್ಟಣದ ಮೈಸೂರು ರಸ್ತೆಯಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಬಳಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಶಶಿಕುಮಾರ್ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ. ತಾನು ಮಲಗುವ ಮನೆ ಕೋಣೆಯಲ್ಲಿ ತಡರಾತ್ರಿ ನೇಣು ಬಿಗಿದುಕೊಂಡಿದ್ದಾನೆ. ಬುಧವಾರ ಬೆಳಗ್ಗೆ ಒಂಬತ್ತು ಗಂಟೆಯಾದರೂ ಕೋಣೆಯಿಂದ ಹೊರಬಾರದ ಹಿನ್ನೆಲೆಯಲ್ಲಿ ಮನೆಯವರು ಗಾಬರಿಗೊಂಡು ಕೋಣೆಯ ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

14 ಎಂಎಲ್‌ವಿ 1
ಶಶಿಕುಮಾರ್(38) ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net