ನೇಣು ಬಿಗಿದುಕೊಂಡು ಆತ್ಮಹತ್ಯೆ

3
Published on

ನೆಲಮಂಗಲ: ಅನಾರೋಗ್ಯದಿಂದ ಬಳಲುತಿದ್ದ ಚಿಕ್ಕಮಾರನಹಳ್ಳಿಯ ರಾಜಣ್ಣ(ಶ್ರೀನಿವಾಸ್) (56) ಶುಕ್ರವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರಸಭೆ ನೀರಗಂಟಿಯಾಗಿದ್ದ ರಾಜಣ್ಣ ಅನಾರೋಗ್ಯ ಕಾರಣಕ್ಕೆ 2 ವರ್ಷದ ಹಿಂದೆ ಕೆಲಸ ಬಿಟ್ಟಿದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅಳಿಯ ಮನೆ ಬಳಿ ಬಂದು ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net