ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

Published on

ತುರುವೇಕೆರೆ: ಪಟ್ಟಣದ ಬೇಟೇರಾಯಸ್ವಾಮಿ ದೇವಾಲಯದ ಬಳಿಯ ಮನೆಯೊಂದರಲ್ಲಿ ಯುವಕನೋರ್ವನ ಶವ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಟ್ಟಣದ ನಿವಾಸಿ ರಾಜೇಶ್​ (37)ಮೃತ. ಈತ ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮನೆಗಳಿಗೆ ಪೈಂಟಿಂಗ್​ ಮಾಡುತ್ತಿದ್ದ ಎನ್ನಲಾಗಿದೆ. ಈತನ ಶವ ಬುಧವಾರ ಬೆಳಗ್ಗೆ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ. ಪಟ್ಟಣದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾದಚಾರಿ ಸಾವು ತುರುವೇಕೆರೆ: ತಾಲೂಕಿನ ತಾವರೇಕೆರೆ 150ಎ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿ ಮಂಗಳವಾರ ರಾತ್ರಿ ಪಾದಚಾರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಾವರೇಕೆರೆ ಬಡಾವಣೆಯ ನಿವಾಸಿ ಸುರೇಶ್​(48) ಮೃತ. ಮಂಗಳವಾರ ರಾತ್ರಿ ತಾವರೇಕೆರೆಯಿಂದ ಬಡಾವಣೆಗೆ ರಸ್ತೆ ಬದಿ ನಡೆದುಕೊಂಡು ಬರುತ್ತಿರುವಾಗ ಕೆ.ಬಿ.ಕ್ರಾಸ್​ ಕಡೆಯಿಂದ ತುರುವೇಕೆರೆ ಕಡೆ ತೆರಳುತ್ತಿದ್ದ ಕಾರು ಗುದ್ದಿದೆ. ಸುರೇಶ್​ ರಸ್ತೆ ಪಕ್ಕದ ಬೇಲಿಯೊಳಗೆ ಬಿದ್ದಿರುವುದನ್ನು ಬುಧವಾರ ಬೆಳಗ್ಗೆ ತೋಟಕ್ಕೆ ಹೋಗುವ ಜನರು ಗಮನಿಸಿ ಪಟ್ಟಣದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಲೋಹಿತ್​, ಪಿಎಸ್​ಐ ಸಂಗಮೇಟಿ ಮತ್ತು ಪೊಲೀಸ್​ ಸಿಬ್ಬಂದಿ ಮೃತ ಸುರೇಶ್​ ಶವವನ್ನು ಹೊರ ತೆಗೆದಿದ್ದಾರೆ. ಮೃತನಿಗೆ ಪತ್ನಿ, ಪುತ್ರ ಇದ್ದಾರೆ. ಪಟ್ಟಣದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net