

ರಾಮದುರ್ಗ: ನೇಕಾರರು ಕೇವಲ ಬಟ್ಟೆ ನೇಯ್ಗೆ ಕಾಯಕ ಮಾಡುವುದು ಅಷ್ಟೇ ಅಲ್ಲದೆ ಹಲವು ರಂಗಗಳಲ್ಲಿ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದಾರೆ ಎಂದು ಹಂಪಿ ಹೇಮಕೂಟ ಮಹಾಸಂಸ್ಥಾನ ಶ್ರೀ ಗಾಯತ್ರಿ ಪೀಠದ ಪೀಠಾಧಿಪತಿ ದಯಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಬಣಕಾರ ಪೇಟೆಯಲ್ಲಿ ಶನಿವಾರ ಬನಶಂಕರಿದೇವಿ ಸಮುದಾಯ ಭವನದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನೇಕಾರ ಜನಕೆ ಹಿತಕಾರ ಎಂಬ ಮಾತಿನಂತೆ ನೇಕಾರರು ಹಲವು ೇತ್ರದಲ್ಲಿ ಸಾಧನೆ ಮಾಡಬಲ್ಲ ಛಲಗಾರರಿದ್ದಾರೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖಂಡ ಪ್ರದಿಪ ಪಟ್ಟಣ, ನಮ್ಮ ತಂದೆ, ತಾಯಿ ಶಾಸಕರಿದ್ದ ಕಾಲದಿಂದಲೂ ನೇಕಾರರು ನಮಗೆ ಬೆಂಬಲಿಸಿದ್ದಾರೆ. ನಿಮ್ಮ ಋಣ ತೀರಿಸಲು ನಾವು ಸಿದ್ಧ ಎಂದರು.
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ನೇಕಾರರ ಸಂಕಷ್ಟದ ಸಂದರ್ಭದಲ್ಲಿ ನಾವು ಶಾಸಕರಿದ್ದ ವೇಳೆ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರ ಫಲವಾಗಿ ನೇಕಾರ ಮಗ್ಗಗಳಿಗೆ 10 ಎಚ್ಪಿ ವರೆಗೆ ರಿಯಾಯಿತಿ ದರದಲ್ಲಿ ವಿದ್ಯುತ್ ದೊರೆಯಿತು. 2019ರ ಮಲಪ್ರಭಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿಯೂ ಮನೆ ಕಳೆದುಕೊಂಡ ನೇಕಾರರಿಗೆ 5 ಲಕ್ಷ ರೂ. ಪರಿಹಾರ ಹಾಗೂ ಹಾನಿಯಾದ ಮಗ್ಗಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.
ರಾಜ್ಯ ದೇವಾಂಗ ಸಂದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಕಾರ್ಯದರ್ಶಿ ಟಿ. ರಾಜೇಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್.ಆರ್. ಲವಕುಮಾರ ಮಾತನಾಡಿದರು. ಇದೇ ವೇಳೆ ಸಮುದಾಯ ಭವನಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸಮಿತಿ ಸದಸ್ಯರು ಸನ್ಮಾನಿಸಿದರು.
ಅರ್ಚಕ ನಿರಂಜನಸ್ವಾಮಿ ದೇವಾಂಗಮಠ, ಆನಂದಸ್ವಾಮಿ ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು. ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಗಜಾನನ ಗುಂಜೇರಿ, ಶಂಕ್ರಣ್ಣ ಮುರುಡಿ, ನಾರಾಯಣಪ್ಪ ಬೆನ್ನೂರ, ಈರಪ್ಪಜ್ಜ ಕೊಣ್ಣೂರ, ಈಶ್ವರ ಸುಳ್ಳದ, ನಾಗಪ್ಪ ಸೋರಿ, ಶಿವಪ್ರಕಾಶ ರೊಟ್ಟಿ, ಈರಣ್ಣ ರಾಮದುರ್ಗ ಇತರರು ಇದ್ದರು. ಜೀಣೋರ್ದ್ಧಾರ ಸಮಿತಿಯ ಅಧ್ಯಕ್ಷ ಏಕನಾಥ ಕೊಣ್ಣೂರ ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರಳಿ ಸೂಳಿಭಾವಿ ಸ್ವಾಗತಿಸಿದರು. ರವೀಂದ್ರ ಹರವಿ ನಿರೂಪಿಸಿದರು. ಚಂದ್ರು ಕಲ್ಲೂರ ವಂದಿಸಿದರು.