

ರಾಮದುರ್ಗ: ನೇಕಾರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಮತ್ತೆ ಅರ್ಜಿ ಆಹ್ವಾನಿಸಿದೆ. ಸಮುದಾಯದ ಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೆಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಶಿವರಾಜ ಕುಲಕರ್ಣಿ ತಿಳಿಸಿದರು.
ಪಟ್ಟಣದ ನೇಕಾರ ಪೇಟೆಯ ವಿಠ್ಠಲ ಮಂದಿರ ಹಾಗೂ ತಾಲೂಕಿನ ಸುರೇಬಾನ&ಮನಿಹಾಳ ಗ್ರಾಮದ ರೂರಲ್ ಸೊಸೆಟಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ನೇಕಾರ ಸಮ್ಮಾನ ಯೋಜನೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ನೇಕಾರರಲ್ಲದವರು ಯೋಜನೆಗಳ ಲಾಭ ಪಡೆಯುತ್ತಿದ್ದು, ಅರ್ಹರಿಗೆ ಯೋಜನೆ ಲಾಭ ತಲುಪಿಸಲು ಸಭೆ ಮಾಡಲಾಗಿದೆ ಎಂದರು.
ಇಲಾಖೆಯ ಪ್ರವರ್ಧನಾಧಿಕಾರಿ ಸಿದ್ದು ಕುಂಬಾರ ಮಾತನಾಡಿದರು. ಜವಳಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಕೆ. ಪೀರಜಾದೆ, ನೇಕಾರ ಮುಖಂಡರಾದ ಶಂಕ್ರಣ್ಣ ಮುರುಡಿ, ಶಿವಾನಂದ ಬಳ್ಳಾರಿ, ಏಕನಾಥ ಕೊಣ್ಣೂರ, ವಕೀಲ ಶ್ರೀನಿವಾಸ ಕುರುಡಗಿ, ಎನ್.ಟಿ.ಹೂಲಿ, ಮನಿಹಾಳ ರೂರಲ್ ಸೊಸೆಟಿ ಅಧ್ಯ ಚಿನ್ನಪ್ಪ ಕಳಸಣ್ಣವರ, ನಾಮದೇವಪ್ಪ ಹುಗ್ಗಿ, ನಾರಾಯಣಪ್ಪ ಕೀಲಿಪುಟ್ಟಿ, ಮಂಜುನಾಥ ಹೊನ್ನುಂಗರ ಇತರರಿದ್ದರು.