ನೇಕಾರರ ಕುಟುಂಬಕ್ಕೆ ಸರ್ಕಾರದಿಂದ ನೆರವು

27arsph3ep
ಅರಸೀಕೆರೆಯಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಎನ್.ಆರ್.ಸಂತೋಷ್ ಮಾತನಾಡಿದರು. ಸಿ.ಗಿರೀಶ್, ವೈ.ಕೆ.ದೇವರಾಜ್, ಬಿ.ಎನ್.ವಿದ್ಯಾಧರ್ ಉಮೇಶ್ ಭೋವಿ ಇತರರು ಇದ್ದರು.
Published on

ಅರಸೀಕೆರೆ: ನಗರದ ಬಸವೇಶ್ವರ ವೃತ್ತದಲ್ಲಿ ದೇವಾಂಗ ಸಮಾಜದ ವತಿಯಿಂದ ಭಾನುವಾರ ಶರಣ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಕಾಯಕದ ಮೂಲಕ ಮಹತ್ವದ ನೇಕಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಬದುಕು ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಅವರ ತತ್ವ, ಚಿಂತನೆ, ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಗೌರವ ಸಮರ್ಪಿಸಬೇಕು ಎಂದು ಸಲಹೆ ನೀಡಿದರು.


ನೇಕಾರ ಸಮುದಾಯದ ಬವಣೆ ಅರಿತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇಯ್ಗೆ ಮಗ್ಗ ಹೊಂದಿರುವ ಕುಟುಂಬ ಸದಸ್ಯರ ನೆರವಿಗೆ ಧಾವಿಸಿದ್ದು ಅನುದಾನದ ಮಹಾಪೂರವನ್ನೇ ಹರಿಸಿದ್ದಾರೆ. ದೇವರ ದಾಸಿಮಯ್ಯ ನಿಗಮ ಸ್ಥಾಪಿಸುವ ಮೂಲಕ ದುಡಿಯುವ ವರ್ಗಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಸಮುದಾಯದ ಬೆಂಬಲಕ್ಕೆ ನಿಂತಿದ್ದರು ಎಂದರು.


ಮುಖಂಡರಾದ ಸಿ.ಗಿರೀಶ್, ಬಿ.ಎನ್.ವಿದ್ಯಾಧರ್ ವೈ.ಕೆ.ದೇವರಾಜ್, ಉಮೇಶ್ ಭೋವಿ, ಬೋರನಕೊಪ್ಪಲು ರವಿ ಇತರರು ಇದ್ದರು. ದೇವಾಂಗ ಸಮಾಜದಿಂದ ಎನ್.ಆರ್.ಸಂತೋಷ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net