ನೇಕಾರ ಸಮುದಾಯಕ್ಕೆ ಸೂಕ್ತ ಸ್ಥಾನಮಾನಕ್ಕೆ ಆಗ್ರಹ

Published on

ಮೈಸೂರು: ರಾಜ್ಯದಲ್ಲಿರುವ ನೇಕಾರ ಸಮುದಾಯ ತೀರಾ ಹಿಂದುಳಿದ್ದು, ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮೈಸೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಸರ್ಕಾರಕ್ಕೆ ಆಗ್ರಹಿಸಿದರು.
ನೇಕಾರರ ವೃತ್ತಿಯಿಂದ ಕೂಡಿರುವ ದೇವಾಂಗ, ಪದ್ಮಶಾಲಿ, ಪಟ್ಟಸಾಲಿ, ಕುರುಹಿನಶೆಟ್ಟಿ, ಹಠಗಾರ, ಬಣ್ಣಗಾರ, ಸೋಮುವಂಶ ಕ್ಷತ್ರಿಯ, ತೊಗಟವೀರ ಹೀಗೆ ಸುಮಾರು 26 ಉಪ ಪಂಗಡಗಳನ್ನು ಒಳಗೊಂಡಿದ್ದು, ಅಂದಾಜು 70 ಲಕ್ಷ ಜನಸಂಖ್ಯೆ ಇದೆ. ಆದರೂ ಸೂಕ್ತ ರಾಜಕೀಯ ಸ್ಥಾನ ಇಲ್ಲದೇ ಹಿಂದುಳಿದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖಂಡರಾದ ಸುನೀಲ್, ಎಸ್. ದಿವಾಕರ್, ಹೇಮಣ್ಣ, ಎಸ್. ದಿನೇಶ್, ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net