ನೇಕಾರ ಸಮುದಾಯಕ್ಕೆ ಮೀಸಲಾತಿ ನೀಡಿ

bkt-19-8
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಉಪಾಧ್ಯಕ್ಷ ರವೀಂದ್ರ ಕಲಬುರ್ಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗುಳೇದಗುಡ್ಡ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಮುಖಂಡರಾದ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಬಸವರಾಜ ಕುಂಬಾವತಿ, ವಿಷ್ಣು ಗೌಡರ, ರಾಜು ದೇವರೆ, ಚಂದಶೇಖರ ಮಂಕಣಿ, ಮಾದೇವಪ್ಪ ಯಾದವಾಡ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ತೀವ್ರ ಸಂಕಷ್ಟದಲ್ಲಿರುವ ನೇಕಾರ ಸಮುದಾಯವು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದೆ. ಹೀಗಾಗಿ ನೇಕಾರ ಸಮುದಾಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ಡಿ.೨೦ ರಂದು ಬೆಳಗಾವಿಯಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೇಕಾರರ ಸಮುದಾಯದಿಂದ ಅಂದು ಬೆಳಗಾವಿಯ ಬಸವೇಶ್ವರ ವೃತ್ತದಿಂದ ಸುವರ್ಣ ಸೌಧದವರೆಗೆ ೮ ಕಿ.ಮೀ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಾಗಲಕೋಟೆ ಜಿಲ್ಲೆಯಿಂದ ೫ ಸಾವಿರ ಜನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾರಾಷ್ಟ್ರದಲ್ಲಿ ರಾಜ್ಯದ ನೇಕಾರ ಸಮುದಾಯಗಳಿಗೆ ಶೇ.೨ ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಅದೇ ಮಾದರಿ ಯಲ್ಲಿ ಶೇ.೫ ರಷ್ಟು ಮೀಸಲಾತಿಯನ್ನು ಸರ್ಕಾರ ಘೋಷಣೆ ಮಾಡಬೇಕು. ಇಲ್ಲದೆ ಹೋದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು. ಕರ್ನಾಟಕದಲ್ಲಿ ಅಂದಾಜು ೭೦ ಲಕ್ಷ ಜನ ಸಂಖ್ಯೆ ಹೊಂದಿರುವ ನೇಕಾರ ಜನಾಂಗಕ್ಕೆ ನೇಕಾರ ಅಭಿವೃದ್ದಿ ನಿಗಮ ಸ್ಥಾಪಿಸಿ, ಅಂದಾಜು ೫೦೦ ಕೋಟಿ ರೂ.ಗಳನ್ನು ಮೀಸಲಿಡಬೇಕು. ನೇಕಾರಿಕೆಯ ಉಪಕರಣಗಳ ಮತ್ತು ಮಗ್ಗಗÀಳ ಖರೀದಿಗೆ ೧ ಕೋಟಿ ಸಾಲ ನೀಡಿ ಶೇ.೭೫ ಸಬ್ಸಿಡಿ ಯೋಜನೆಯನ್ನು ಜಾರಿ ಮಾಡಬೇಕು. ೨೦ ಎಚ್‌ಪಿ ವರೆಗೆÀ ಉಚಿತ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಕೂಲಿ ಮಾಡುವ ನೇಕಾರರನ್ನು ಕಾರ್ಮಿಕ ನೇಕಾರರೆಂದು ಪರಿಗಣಿಸಿ ಕೂಲಿ ಕಾರ್ಮಿಕರಿಗೆ ಸಿಗುವ ಎಲ್ಲ ಯೋಜನೆಗಳನ್ನು ಕಾರ್ಮಿಕ ಇಲಾಖೆಯಿಂದ ನೇಕಾರರಿಗೆ ಒದಗಿಸಬೇಕು. ಡಿಸಿಸಿ ಬ್ಯಾಂಕಗಳ ಮೂಲಕ ನೀಡುವ ಶೇ.೧ ಮತ್ತು ಶೇ.೩, ಶೇ.೧೦ ಬಡ್ಡಿದರ ಸಾಲ ಪಡೆದ ನೇಕಾರರ ಸಾಲಗಳ ಬಡ್ಡಿ ಮರುಸಂದಾಯ ಹಣ ತಕ್ಷಣ ಬಿಡುಗಡೆಯಾಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಒಕ್ಕೂಟದ ಮುಖಂಡರಾದ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಬಸವರಾಜ ಕುಂಬಾವತಿ, ವಿಷ್ಣು ಗೌಡರ, ರಾಜು ದೇವರೆ, ಚಂದಶೇಖರ ಮಂಕಣಿ, ಮಾದೇವಪ್ಪ ಯಾದವಾಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net