ನೆಹರೂರವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಎಂ.ಕೆ. ಕಮಲ್ ಕುಮಾರ್

ನೆಹರೂರವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಎಂ.ಕೆ. ಕಮಲ್ ಕುಮಾರ್
Published on

ಹಾಸನ: ಜವಾಹರ ಲಾಲ್ ನೆಹರೂರವರ ಜೀವನ ಚರಿತ್ರೆ ಮತ್ತು ಅವರ ಆದರ್ಶಗಳನ್ನು ನಾವು ಪಾಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ಹಾಗೂ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ಕಮಲ್ ಕುಮಾರ್ ಕರೆ ನೀಡಿದರು.


ನಗರದ ಆರ್.ಸಿ. ರಸ್ತೆ ಬಳಿ ಇರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿಭಜಿತ ಪ್ರೌಢಶಾಲಾ ಸಭಾಂಗಣದಲ್ಲಿ ಸೋಮವಾರ ಭಾರತ ಸೇವಾದಳ ಹಾಗೂ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜವಾಹರ ಲಾಲ್ ನೆಹರೂ ಭಾರತ ಸೇವಾದಳದ ಮೊದಲ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ಭಾರತ ಸೇವಾದಳ ಹಾಸನ ತಾಲೂಕು ಸಮಿತಿಯ ಎಚ್.ಆರ್ ನಾಗೇಶ್, ಪ್ರಭಾರಿ ಉಪ ಪ್ರಾಂಶುಪಾಲ ಬಿ.ಎಸ್. ಮಲ್ಲೇಶ್ ಗೌಡ ಮಾತನಾಡಿದರು.


ಸುಮಾರು 11 ವರ್ಷಗಳಿಂದ ಭಾರತ ಸೇವಾದಳವನ್ನು ಶಾಖೆಯನ್ನು ಉತ್ತಮವಾದ ರೀತಿಯಲ್ಲಿ ವಿಭಜಿತ ಶಾಲೆಯಲ್ಲಿ ನಡೆಸುತ್ತಿರುವ ಸೇವಾದಳ ಶಿಕ್ಷಕಿ ಡಿ.ಇ. ರೂಪರವರನ್ನು ಭಾರತ ಸೇವಾದಳ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆಯುವ ಪತಸಂಚಲನೆಯಲ್ಲಿ ಭಾಗವಹಿಸಿ ಪ್ರತಿ ವರ್ಷವೂ ಬಹುಮಾನ ಪಡೆದುಕೊಂಡು ಬರುತ್ತಿರುವ ಭಾರತ ಸೇವಾದಳದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಶಾಂತಮ್ಮ , ಶೈಲಜಾ , ಲತಾ ಭಟ್, ಸುಮನ್ ರಾಮಮೂರ್ತಿ, ಶಾಂತಮ್ಮ, ಶೈಲಜಾ, ರಾಮು, ಶಾಲೆಯ ಸಂಘಟನಾ ಕಾರ್ಯದರ್ಶಿ ಅನನ್ಯ ಪ್ರಕಾಶ್, ಸೇವಾದಳದ ವಿದ್ಯಾರ್ಥಿನಿ ಮರಿಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net