ನೆಹರು ಮೈದಾನವನ್ನು ವಾಕಿಂಗ್​ಗೆ ಅಣಿಗೊಳಿಸಿ

neharu ground walkers
Published on

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ನೆಹರು ಮೈದಾನವನ್ನು ವಾಕಿಂಗ್ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಅಣಿಗೊಳಿಸಿ ಎಂದು ಬ್ಲೂಮರ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಹಾಗೂ ವಾಯು ವಿಹಾರಿಗಳು ಆಗ್ರಹಿಸಿದರು.

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಮಂಗಳವಾರ ಈ ವಿಷಯವನ್ನು ಗಮನಕ್ಕೆ ತಂದರು. 1 ವರ್ಷದ ಬಳಿಕ ಸಾರ್ವಜನಿಕರು ಕ್ರಿಕೆಟ್, ವಾಲಿಬಾಲ್, ಫುಟ್​ಬಾಲ್ ಆಡಲು, ಬೆಳಗ್ಗೆ ವಾಕಿಂಗ್ ಮಾಡಲು ಆಗಮಿಸುತ್ತಿದ್ದಾರೆ. ಆದರೆ, ಮೈದಾನದಲ್ಲಿ ಸಾಕಷ್ಟು ಚೂಪಾದ ಕಲ್ಲುಗಳು, ಅನಗತ್ಯ ತ್ಯಾಜ್ಯಗಳು ಬಿದ್ದಿದ್ದು, ತೊಂದರೆಯಾಗುತ್ತಿವೆ, ಇವನ್ನೆಲ್ಲ ತೆರವುಗೊಳಿಸಬೇಕು ಎಂದು ಹೇಳಿದರು.

ಆದಷ್ಟು ಬೇಗ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೂಚಿಸಿದರು.

ಬ್ಲೂಮರ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ಪ್ರಕಾಶ ಜೈನ್, ಮನೀಶ ಕೊಠಾರಿ, ಎಸಿಪಿ ಸಂಚಾರ ವಿನೋದ ಮುಕ್ತೇದಾರ, ದಿನೇಶ ರಾಥೋಡ, ಸುಶೀಲ್ ಜೈನ, ನಿತೇಶ ಭೂರತ್, ಸುರೇಶ ಸಿ. ಜೈನ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net