ನೆಹರು ಅವರಲ್ಲಿ ಇತ್ತು ಅಪಾರ ದೂರ ದೃಷ್ಟಿ

ctd ----6
Published on

ಚಿತ್ರದುರ್ಗ:ಕಷ್ಟ ಕಾಲದಲ್ಲಿ ಭಾರತವನ್ನು ಮುನ್ನಡೆಸಿದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಲ್ಲಿ ದೂರದೃಷ್ಟಿ ಇತ್ತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಜವಾಹರಲಾಲ್‌ನೆಹರು ಅವರ ಪು ಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕೃಷಿ, ಕೈಗಾರಿಕೆ,ಶಿಕ್ಷಣಕ್ಕೆ ನೆಹರು ಹೆಚ್ಚಿನ ಒತ್ತು ಕೊಟ್ಟಿದ್ದರಿಂದಾಗಿ ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿದೆ. ಅವರ ನಾ ನಾ ಯೋಜನೆಗಳಿಂದಾಗಿ ದೇಶ ದಲ್ಲಿರುವ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಫಲಾನುಭವಿಗಳಾಗಿದ್ದಾರೆ. ನೆಹರು ಅವರಿಗೆ ಯಾರು ಸಾಟಿಯಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್‌ಬಿಟಿ ಜಮೀರ್ ಮಾತನಾಡಿ, ನೆಹರು ಪಂಚವಾರ್ಷಿಕ ಯೋಜನೆ ಜಾರಿಗೆ ತಂದರು. 60 ವರ್ಷ ಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುವ ಬಿಜೆಪಿ ಮೊದಲು ದೇಶಕ್ಕೆ ನೆಹರು ಅವರು ಕೊಟ್ಟಿರುವ ಕೊಟ್ಟಿರುವ ಕೊಡುಗೆಗಳನ್ನು ತಿಳಿದುಕೊಳ್ಳಲಿ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‌್ಯದರ್ಶಿ ಡಿ.ಎನ್.ಮೈಲಾರಪ್ಪ,ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ,ಪಕ್ಷದ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿದರು. ಸಂಪತ್‌ಕುಮಾರ್,ಜಿ.ಎಸ್.ಕುಮಾರ್‌ಗೌಡ, ಎಸ್.ಎನ್. ರವಿ ಕುಮಾರ್, ಮುದಸಿರ್‌ನವಾಜ್, ಸುದರ್ಶನ್, ಮಂಜುನಾಥ್,ವಸೀಂ,ರಮೇಶ್ ಮದಕರಿಪುರ,ಸೈಯದ್ ಖುದ್ದೂಸ್,ವಕೀಲ ಮಹಮ ದ್‌ರಫಿ, ತಿಪ್ಪೇಸ್ವಾಮಿ,ಪವಿತ್ರಾ,ರೇಣುಕಾ,ಜ್ಯೋತಿಲಕ್ಷ್ಮೀ ಗೋಪಿಯಾದವ್,ಭೂತೇಶ್,ನೇತ್ರಾವತಿ,ಲತಾಮಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net