ನೆಲಮಂಗಲದಲ್ಲಿ ಗಾಂಧಿ ನಡಿಗೆ

00000
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗಾಂಧೀಜಿ ಸ್ವಹಿತಕ್ಕಾಗಿ ಸೀಮಿತರಾಗದೆ ದೇಶಕ್ಕಾಗಿ ಬದುಕಿ ಮಡಿದವರು. ಹೀಗಾಗಿ ಅವರ ತತ್ವಾದರ್ಶ ಅವಿಸ್ಮರಣೀಯವಾಗಿ ಉಳಿಯಲಿದೆ ಎಂದು ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಹೇಳಿದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷದ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರ ಬಳಿ ಗಾಂಧಿ ನಡಿಗೆ ಹೆಸರಿನಡಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದರು. ಅಹಿಂಸಾ ಮಾರ್ಗದಿಂದಲೇ ಇಡೀ ಜಗತ್ತನ್ನು ಗೆದ್ದಿರುವ ಗಾಂಧೀಜಿ ರಾಷ್ಟ್ರಪಿತರೆನಿಸಿದ್ದಾರೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು ಮಾತನಾಡಿ, ಗಾಂಧೀಜಿ ಆದರ್ಶ ಬದುಕು, ಹೋರಾಟಗಳನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ವಿಶ್ವದಾದ್ಯಂತ ಗಾಂಧೀಜಿ ಸ್ಮರಣೆ ಮಾಡಲಾಗುತ್ತಿದೆ ಎಂದರು. ತಾಲೂಕು ಕಚೇರಿವರೆಗೂ ಜೈಕಾರ ಹಾಕುವ ಮೂಲಕ ಪಾದಯಾತ್ರೆ ನಡೆಯಿತು. ತಾಲೂಕು ಕಚೇರಿ ಬಳಿ ವೇದಿಕೆಯಲ್ಲಿ ಗಾಂಧೀಜಿ ಹಾಗೂ ಲಾಲ್‌ಬಹಾದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net