ನೆಲಮಂಗಲ ಪರಮಣ್ಣ ಬಡಾವಣೆಯಿಂದ ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರ

09 Nela ph 01 Sub Rigistar Office
Published on

ನೆಲಮಂಗಲ: ನಗರದ ಪರಮಣ್ಣ ಬಡಾವಣೆಯಿಂದ ಭಿನ್ನಮಂಗಲದ ಮುಖ್ಯರಸ್ತೆಯಲ್ಲಿನ ಎನ್.ಎಚ್. ಕಾಂಪ್ಲೆಕ್ಸ್ ಕಟ್ಟಡಕ್ಕೆ ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರಗೊಂಡಿದ್ದು, ನೋಂದಣಿ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಇಲಾಖೆ ಆಯುಕ್ತ ರವೀಂದ್ರ ನೂತನ ಕಚೇರಿಯನ್ನು ಉದ್ಘಾಟಿಸಿದರು.

8 ವರ್ಷಗಳ ಹಿಂದೆ ತಾಲೂಕು ಕಚೇರಿಯಲ್ಲಿನ ಚಿಕ್ಕ ಕೊಠಡಿಯಲ್ಲಿದ್ದ ಸಬ್‌ರಿಜಿಸ್ಟರ್ ಕಚೇರಿಯನ್ನು ಪರಮಣ್ಣ ಹೆಸರಿನ ವಸತಿ ಬಡಾವಣೆಯ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ವಾಹನ ನಿಲುಗಡೆಗೆ ವ್ಯವಸ್ಥೆ ಇರಲಿಲ್ಲ. ಕಚೇರಿ ಇದ್ದ ಬಡಾವಣೆಯ ರಸ್ತೆಯಲ್ಲಿ ನಿತ್ಯ ವಾಹನದಟ್ಟಣೆಯಿಂದ ನಿವಾಸಿಗಳು ಹೈರಾಣಗೊಂಡು, ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಗರದ ಹೊರವಲಯದ ಭಿನ್ನಮಂಗಲದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಕಚೇರಿ ವ್ಯವಸ್ಥಾಪಕ ಸಿ.ಸಣ್ಣಪ್ಪ, ಗುಮಾಸ್ತ ಸತೀಶ್, ಕೃಷ್ಣಮೂರ್ತಿ, ಕಟ್ಟಡ ಮಾಲೀಕ ಬಿ.ಜಿ.ವಾಸು, ಪತ್ರಬರಹಗಾರರ ಸಂಘದ ಕಾರ್ಯದರ್ಶಿ ನಾರಾಯಣಮೂರ್ತಿ, ಖಜಾಂಚಿ ಎಸ್,ಗಂಗರಾಜು ಮತ್ತಿತರರು ಇದ್ದರು.

ಪಾರ್ಕಿಂಗ್ ವ್ಯವಸ್ಥೆ: ನಗರಸಭಾ ವ್ಯಾಪ್ತಿಯ ಭಿನ್ನಮಂಗಲದ ಮುಖ್ಯರಸ್ತೆಯಲ್ಲಿನ ಖಾಸಗಿ ಕಟ್ಟಡಕ್ಕೆ ಉಪನೋಂದಣಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸಿದ್ದು, ವಾಹನನಿಲುಗಡೆ, ಶೌಚಗೃಹ, ಹೋಟೆಲ್, ಜೆರಾಕ್ಸ್, ಕೆಲ ಪತ್ರಬರಹಗಾರರಿಗೂ ವ್ಯವಸ್ಥೆ ಮಾಡಿಕೊಡಲಾಗಿದೆ.

ಸಾರ್ವಜನಿಕರು ಹಾಗೂ ಪತ್ರಬರಹಗಾರರನ್ನು ಪ್ರಮುಖವಾಗಿಟ್ಟುಕೊಂಡು ಕಚೇರಿಯನ್ನು ಸ್ಥಳಾಂತರಿಸಿದ್ದು, ಕಾರ್ಯಾರಂಭ ಮಾಡಲಾಗಿದೆ. ಶೀಘ್ರದಲ್ಲಿ ದಾಖಲೆಗಳನ್ನು ಸ್ಥಳಾಂತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ರವೀಂದ್ರೇಗೌಡ ಹಿರಿಯ ಉಪನೊಂದಣಾಧಿಕಾರಿ ಉಪನೋಂದಣಾಧಿಕಾರಿ ಕಚೇರಿಯನ್ನು ನಗರದ ಮುಖ್ಯರಸ್ತೆಗೆ ಕಚೇರಿ ಸ್ಥಳಾಂತರಗೊಂಡಿರುವುದು ಸಂತಸದ ಸಂಗತಿ. ಸಾರ್ವಜನಿಕರು ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿ ಮತ್ತೆ ವಾನಹದಟ್ಟಣೆಗೆ ಎಡೆಮಾಡಿಕೊಡದೆ ಕಟ್ಟಡ ಮಾಲೀಕರು ಒದಗಿಸಿರುವ ಪಾರ್ಕಿಂಗ್ ಸ್ಥಳವನ್ನು ಬಳಕೆ ಮಾಡಿಕೊಳ್ಳಬೇಕು. ಸಿದ್ಧರಾಮು ದಾಸ್ತವೇಜು ಬರಹಗಾರರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net