ನೆಲದ ಭಾಷೆ ಗೌರವಿಸಿ

TKE kannadda
ತರಿಖೆರೆ ವಾಸ್ತುಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಧ್ವಜಾರೋಹಣ ನೆರವೇರಿಸಿದರು. ರಾಮಚಂದ್ರಪ್ಪ, ಭೋಜರಾಜ್, ಪ್ರದೀಪ್, ಟಿ.ಎಂ.ರವಿಕುಮಾರ್ ಇತರರಿದ್ದರು.
Published on

ತರೀಕೆರೆ: ಕನ್ನಡ ನೆಲದಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ಭಾಷಾಭಿಮಾನ ಅಗತ್ಯ ಎಂದು ವಾಸ್ತುಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಹೇಳಿದರು.

ಪಟ್ಟಣದಲ್ಲಿ ವಾಸ್ತುಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದಿಂದ ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಜೀವನಕ್ಕೆ ದಾರಿಯಾಗಿರುವ ವೃತ್ತಿಯನ್ನು ಗೌರವಿಸುವುದು ಮಾತ್ರವಲ್ಲ, ಅನ್ನ ನೀಡುವ ಭಾಷೆ ಬೆಳೆಸುವ ಸಂಕಲ್ಪ ಮಾಡಬೇಕು ಎಂದರು. ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ವಾಸ್ತುಶಿಲ್ಪಿ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷ ಭೋಜರಾಜ್, ಕಾರ್ಯದರ್ಶಿಗಳಾದ ಪ್ರದೀಪ್, ಮಂಜಪ್ಪ, ಖಜಾಂಚಿ ಟಿ.ಎಂ.ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net