

ಕುರುಗೋಡು: ತಾಲೂಕಿನ ವಿವಿಧೆಡೆ ಮಂಗಳವಾರ ಉತ್ತಮ ಮಳೆ ಸುರಿದಿದ್ದು, ಭತ್ತದ ಪೈರು ನೆಲಕಚ್ಚಿದೆ. ಬೆಳೆ ಸಂರಕ್ಷಣೆಗೆ ರೈತರು ಪರದಾಡಿದರು.
ಕುರುಗೋಡು, ಯಲ್ಲಾಪುರ, ಶ್ರೀನಿವಾಸ್ ನಗರ, ಲಕ್ಷ್ಮೀಪುರ, ಕಲ್ಲುಕಂಬ, ಗೆಣಿಕೆಹಾಳ್, ಸೋಮಲಾಪುರ, ಕೆರೆಕೆರೆ, ಮುಷ್ಟಗಟ್ಟೆ ಗ್ರಾಮದಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಮಳೆ ಸುರಿಯಿತು. ಇದರಿಂದ ಕಟಾವಿಗೆ ಬಂದಿದ್ದ ಭತ್ತದ ಪೈರು ನೆಲಕಚ್ಚಿದೆ. ಹಲವೆಡೆ ಮೆಣಸಿನಕಾಯಿ ಬೆಳೆದಿರುವ ಜಮೀನಿನಲ್ಲಿ ನೀರು ನಿಂತಿದೆ. ಮೆಕ್ಕೆಜೋಳ ಕಟಾವು ಮಾಡಿ ರಾಶಿ ಹಾಕಿದ್ದು, ಫಸಲಿನ ರಕ್ಷಣೆಗೆ ರೈತರು ಟಾರ್ಪಲ್ ಮೊರೆ ಹೋದರು.