

ಮೂಡಲಗಿ: ಮೂಡಲಗಿ ತಾಲೂಕು ಹಾಗೂ ಅರಬಾವಿ ೇತ್ರದಲ್ಲಿ ಟಪ್ರಭಾ ನದಿ ಪ್ರವಾಹದಿಂದ, ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕರುನಾಡ ರಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಮಂಜುನಾಥ ಜಲ್ಲಿ ನೇತೃತ್ವದಲ್ಲಿ ಪದಾಧಿಕಾರಿಗಳು ಮೂಡಲಗಿ ತಹಸೀಲ್ದಾರ್ ಕಚೇರಿಯ ಶಿರಸ್ತೆದಾರ ಪರಶುರಾಮ ನಾಯಕ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಎಸ್ಡಿಆರ್ಎ್, ಎನ್ಡಿಆರ್ಎ್ ಅಡಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಬೆಳೆಹಾನಿ ಮತ್ತು ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಮಾರ್ಗಸೂಚಿಯು ಸಂಪೂರ್ಣ ಅವೆಜ್ಞಾನಿಕವಾಗಿದೆ. ಅದರಿಂದ ಯೋಗ್ಯ ಪರಿಹಾರ ಸಿಗುವುದಿಲ್ಲ. ಟಪ್ರಭಾ ನದಿ ತೀರದ ಸುಮಾರು 30 ಗ್ರಾಮಗಳಲ್ಲಿ ಮಳೆಯಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕಷಿ ಮತ್ತು ತೋಟಗಾರಿಕೆ ಬೆಳೆಗಳು, ಮನೆಗಳೂ ಹಾಳಾಗಿವೆ. ಹಾನಿಗೊಳಗಾದ ಕುಟುಂಬಸ್ಥರಿಗೆ ಸರ್ಕಾರದ ಶ್ರೀ ಸಮೀೆ ನಡೆಸಿ ಪರಿಹಾರ ಧನ ಕೊಡಿಸಬೇಕು. ಪ್ರವಾಹಪೀಡಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಸಿದ್ದು ಕಂಕಣವಾಡಿ, ಮಲ್ಲಿಕಾರ್ಜುನ ಮರಕುಂಬಿ, ಸಿದ್ದಮ್ಮ ಕಟ್ಟಿಕಾರ, ಲಕ್ಷಿ$್ಮ ಹಾದಿಮನಿ ಇತರರು ಇದ್ದರು.