ನೆಮ್ಮದಿ ಬದುಕಿಗೆ ಸಂಗೀತ ಒಲವಿರಲಿ - ಅಶ್ವತ್ಥ ವೈದ್ಯ

0102
Published on

ಉಗರಗೋಳ: ಅಧುನಿಕತೆಯಿಂದ ಸಂಗೀತ ಕಲೆ ನಶಿಸಿ ಹೋಗುತ್ತಿದ್ದು, ಯುವಪೀಳಿಗೆ ಆಟಪಾಠದ ಜತೆಗೆ ಸಂಗೀತವನ್ನೂ ಕಲಿಯಬೇಕು ಎಂದು ಯುವ ಮುಖಂಡ ಅಶ್ವತ್ಥ ವೈದ್ಯ ಹೇಳಿದರು.

ಸಮೀಪದ ಚಿಕ್ಕುಂಬಿ ಗ್ರಾಮದಲ್ಲಿ ಜಗದ್ಗುರು ಅಜಾತ ನಾಗಲಿಂಗ ಸ್ವಾಮೀಜಿಯ 143ನೇ ಪುಣ್ಯಾರಾಧನೆ ನಿಮಿತ್ತ ಗ್ರಾಮದ ಸಂಗೊಳ್ಳಿ ರಾಯಣ್ಣ ಯುವಕ ಮಂಡಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರೂ ಒತ್ತಡದ ಬದುಕು ಸಾಗಿಸುತ್ತಿದ್ದಾರೆ. ಅದರಿಂದ ಹೊರಬಂದು ನೆಮ್ಮದಿ ಬದುಕು ಸಾಗಿಸಲು ಸಂಗೀತದತ್ತ ಒಲವು ಬೆಳಸಿಕೊಳ್ಳುವ ಜತೆಗೆ ದೇಸಿ ಕೆಲೆಗಳನ್ನು ಪೋಷಿಸುವ ಕೆಲಸವಾಗಬೇಕು ಎಂದರು.

ಅಭಿನವ ನಾಗಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸುರೇಶಗೌಡ ಬಡಗಿಗೌಡ್ರ, ಮಹಾಂತೇಶ ಸಂಗ್ರೇಶಿ, ಯಲ್ಲವ್ವ ಉಪ್ಪಾರ, ಡಿ.ಡಿ. ಟೋಪೋಜಿ, ಮಲ್ಲು ಜಕಾತಿ, ಪಿ.ವೈ. ಗಾಜಿ, ಗಿರೀಶ ಭೀಮರಡ್ಡಿ, ಸಂತೋಷ ನೊರೆಯವರ, ಈಶ್ವರ ಮೇಟಿ, ಮಹಾಂತೇಶ ಸಂಗ್ರೇಶ, ಗಂಗಪ್ಪ ಶಿರಸಂಗಿ, ಪುಂಡಲೀಕ ಸಂಗ್ರೇಶ, ಮಹಾದೇವಪ್ಪ ಸಿದ್ದಾಪೂರ, ರಂಗನಾಥ ಸಂಗ್ರೇಶ, ಪುಂಡಲೀಕ ಕುರಿ, ಮಮ್ಮದಅಲಿ ದೊಡಮನಿ, ಬಾಳಪ್ಪ ಗೋವಣ್ಣವರ, ಎಂ.ಡಿ. ಸಿದ್ದಾಪೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net