

ಕೆಂಭಾವಿ: ಇAದಿನ ಪ್ರಾಪಂಚಿಕ ಜೀವನದ ಕಷ್ಟ-ಸುಖಗಳ ಮಧ್ಯೆ ಒಂದಿಷ್ಟು ಮಧುರ ಜೀವನ ನಡೆಸಲು ಸದ್ಗುರುವಿನ ಕಾರುಣ್ಯ ಬೇಕು ಎಂದು ಸಂಗೀತ ಶಿಕ್ಷಕ ರಮೇಶ ಶಾಸ್ತಿç ಯಾಳಗಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರುಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದಿಂದ ಸೋಮವಾರ ಹಮ್ಮಿಕೊಂಡ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ಅಂತಸ್ತು ಅಷ್ಟ ಐಶ್ವರ್ಯ ಇದ್ದರೂ ಒಂದು ದಿನ ಸಾವು ನಿಶ್ಚಿತ. ಇಂಥ ಪ್ರಾಪಂಚಿಕ ಜೀವನದಲ್ಲಿ ನಮಗೆ ಸದಾ ಆನಂದ ಉಂಟುಮಾಡುವುದೇ ಇಂತಹ ಸತ್ಸಂಗ, ಶಿವಾನುಭವ ಗೋಷ್ಠಿ. ಇಂತಹ ಧರ್ಮ ಜಾಗೃತಿ ಬಿತ್ತುವ ಕಾರ್ಯದಲ್ಲಿ ನಿರಂತರ ತೊಡಗಿರುವ ಹಿರೇಮಠದ ಪೂಜ್ಯರ ಕಾರ್ಯ ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರು,ನಮ್ಮ ಜೀವನದಲ್ಲಿ ವಿನಾಃ ಕಾರಣ ಕಾಲಹರಣ ಮಾಡದೆ ಕಾಲಜ್ಞಾನಿಗಳ, ಶರಣರ, ಸಂತರ ಮತ್ತು ದಾಸರ ಬದುಕಿನ ಬರಹವನ್ನು ನಮ್ಮ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಸಮಾಜದ ಶಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಪ್ರವೀಣಕುಮಾರ ಹುಣಸಗಿ ಹಾಗೂ ಸೋಮನಾಥ ಯಾಳಗಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಹಾದೇವಪ್ಪ ವಜ್ಜಲ, ನಿಂಗನಗೌಡ ದೇಸಾಯಿ, ನಿಜಗುಣಿ ವೀಶ್ವಕರ್ಮ, ಅಭಿಷೇಕ ಪಾಟೀಲ್, ಅವ್ವಣ್ಣ ಮಡಿವಾಳ ಇತರರಿದ್ದರು. ಡಾ.ಯಂಕನಗೌಡ ನಿರೂಪಿಸಿ ವಂದಿಸಿದರು.